BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಮುರಿದು ಬಿದ್ದ ಬೃಹತ್ ಮರ: ಹಲವು ವಾಹನಗಳು ಜಖಂ

ಬೆಂಗಳೂರು: ನಗರದಲ್ಲಿ ಭಾರೀ ಮಳೆಗೆ ಬಹು ದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ಇದೀಗ ಮತ್ತೆ ನಗರದ ಹಲವೆಡೆ ಮಳೆ ಪುನರಾರಂಭಗೊಂಡಿದ್ದು, ಸಂಚಾರ ದಟ್ಟಣೆ ಕೂಡ ಉಂಟಾಗಿದೆ. ಇದರ ನಡುವೆ ಮಳೆಯಿಂದಾಗಿ ಮರವೊಂದು ಮುರಿದು ಬಿದ್ದ ಪರಿಣಾಮ, ಅದರಡಿ ನಿಲ್ಲಿಸಲಾಗಿದ್ದಂತ ಹಲವು ವಾಹನಗಳು ಜಖಂಗೊಂಡಿರುವಂತ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ಬೆಂಗಳೂರು ನಗರದಲ್ಲಿ ವರುಣ ಮತ್ತೆ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವ ಪರಿಣಾಮ, ರಸ್ತೆಗಳೆಲ್ಲ ಜಲಾವೃತಗೊಂಡು ರಸ್ತೆ ಯಾವುದೋ, ಗುಂಡಿ ಯಾವುದೋ ಒಂದೂ ವಾಹನ ಸವಾರರಿಗೆ ತಿಳಿಯದಂತೆ ಆಗಿದೆ. … Continue reading BREAKING: ಬೆಂಗಳೂರಲ್ಲಿ ಭಾರೀ ಮಳೆಗೆ ಮುರಿದು ಬಿದ್ದ ಬೃಹತ್ ಮರ: ಹಲವು ವಾಹನಗಳು ಜಖಂ