ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮುಖದ ಆರೈಕೆಗಾಗಿ ತೆಗೆದುಕೊಂಡ ಕಾಳಜಿ ಕಾಲು ಮತ್ತು ಕೈಗಳಿಗೆ ತೆಗೆದುಕೊಳ್ಳುವುದಿಲ್ಲ. ಅನೇಕ ಜನರು ತಮ್ಮ ಕೈ ಮತ್ತು ಕಾಲುಗಳ ಆರೈಕೆಯ ಬಗ್ಗೆ ಸ್ವಲ್ಪ ಅಸಡ್ಡೆ ಹೊಂದಿರುತ್ತಾರೆ. ಅಂತಹ ದೀರ್ಘಕಾಲದ ನಿರ್ಲಕ್ಷ್ಯದಿಂದಾಗಿ, ಕಾಲುಗಳ ಸ್ಥಿತಿಯು ಮತ್ತಷ್ಟು ಹದಗೆಡುತ್ತದೆ. ಪಾದದ ಆರೈಕೆಗಾಗಿ ಪಾರ್ಲರ್‌ಗೆ ಹೋಗದೆ ಬೇರೆ ದಾರಿಯಿಲ್ಲ. ಆದರೆ ಪಾರ್ಲರ್ ನಲ್ಲಿರುವಷ್ಟೇ ಸುಲಭವಾಗಿ ಮನೆಯಲ್ಲೇ ಪೆಡಿಕ್ಯೂರ್ ಮಾಡಬಹುದು. ಇದು ಹಣವನ್ನ ಉಳಿಸುತ್ತದೆ. ಇದು ಉತ್ತಮ ಫಲಿತಾಂಶವನ್ನೂ ನೀಡುತ್ತದೆ. ಹಾಗಿದ್ರೆ, ಮನೆಯಲ್ಲಿಯೇ ಪೆಡಿಕ್ಯೂರ್ ಮಾಡುವುದು ಹೇಗೆಂದು ತಿಳಿಯೋಣ.

ಮೊದಲು ನಿಮ್ಮ ಪಾದಗಳನ್ನ ಚೆನ್ನಾಗಿ ತೊಳೆದುಕೊಳ್ಳಿ. ಅದರ ನಂತರ ಬಾಳೆಹಣ್ಣಿ ಸಿಪ್ಪೆಯಿಂದ ಪಾದಗಳನ್ನ ಚೆನ್ನಾಗಿ ಉಜ್ಜಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಅಡಿಗೆ ಸೋಡಾ ಬೆರೆಸಿ ಉಜ್ಜುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯಲ್ಲಿ ಸ್ವಲ್ಪ ಅಡಿಗೆ ಸೋಡಾವನ್ನ ಬೆರೆಸಿ ಮತ್ತು ಅದರೊಂದಿಗೆ ಪಾದಗಳನ್ನ ಉಜ್ಜಿಕೊಳ್ಳಿ.

ಅದರ ನಂತ್ರ ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ಪಾದಗಳನ್ನ ತೊಳೆಯಿರಿ. ಟವೆಲ್’ನಿಂದ ಒರೆಸಿ ಮಾಯಿಶ್ಚರೈಸರ್ ಹಚ್ಚಿದರೆ ಪಾದಗಳು ಹೊಳೆಯುತ್ತವೆ.

ಇನ್ನು ಬಾಳೆಹಣ್ಣಿನ ಸಿಪ್ಪೆ, ಮೊಸರು ಮತ್ತು ಜೇನುತುಪ್ಪವನ್ನ ಮಿಕ್ಸಿಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್’ನ್ನ ಪಾದಗಳಿಗೆ ಸ್ಕ್ರಬ್ ರೀತಿಯಲ್ಲಿ ಹಚ್ಚಿ ಸ್ವಲ್ಪ ಹೊತ್ತು ಇಟ್ಟು ತೊಳೆಯಿರಿ. ಹೀಗೆ ಮಾಡುವುದರಿಂದ ಪಾದಗಳು ಸುಂದರ ಮತ್ತು ಆರೋಗ್ಯಕರವಾಗಿರುತ್ತದೆ.

 

NWKRTC ಗೆ ಶೀಘ್ರ 784 ಹೊಸ ಬಸ್​ಗಳ ಪೂರೈಕೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

BREAKING : ಮುಂದಿನ ವರ್ಷದ ವೇಳೆಗೆ ಏರ್ ಇಂಡಿಯಾದಲ್ಲಿ ‘ವಿಸ್ತಾರಾ’ ವಿಲೀನ : CEO ‘ವಿನೋದ್ ಕಣ್ಣನ್’ ಮಾಹಿತಿ

ದೇಶದಲ್ಲಿ ಮೊದಲ ಬಾರಿಗೆ ಕಚ್ಚಾ ತೈಲ ನಿಕ್ಷೇಪ ಪತ್ತೆ : ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Share.
Exit mobile version