ಸುಭಾಷಿತ :

Saturday, December 7 , 2019 7:00 PM

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇಲ್ಲಿದೆ ಪ್ರಮುಖ ಮಾಹಿತಿ


Monday, December 2nd, 2019 5:30 am

ಸ್ಪೆಷಲ್‌ಡೆಸ್ಕ್: ಇತ್ತೀಚಿನ ಕೆಲವು ಅಧ್ಯಯನವು  ಸ್ಮಾರ್ಟ್ಫೋನ್ ಬಳಕೆದಾರರ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಅನೇಕ ಮಾಹಿತಿಗಳನ್ನು ಹೊರ ಹಾಕಿದೆ. ಸೂಕ್ತವಲ್ಲದ ಭಂಗಿಗಳಿಂದ ಮಸ್ಕ್ಯುಲೋಸ್ಕೆಲಿಟಲ್ ಎನ್ನುವ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ವಿಶ್ವದ 3.4 ಬಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಹೆಚ್ಚಿನವರು ಪಠ್ಯ ಸಂದೇಶವನ್ನು ಕಳುಹಿಸುವ ವೇಳೆಯಲ್ಲಿ ಅವರ ಕುತ್ತಿಗೆ ಸಾಕಷ್ಟು ಅಪಾಯಕ್ಕೆ ದೂರುತ್ತದೆ ಎನ್ನಲಾಗಿದೆ.

ಥೈಲ್ಯಾಂಡ್‌ನ ಖೋನ್ ಕಾನ್ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ವಿಡಿಯೋ ಸಂಶೋಧಕರು ಥೈಲ್ಯಾಂಡ್‌ನಲ್ಲಿ 18 ರಿಂದ 25 ವರ್ಷ ವಯಸ್ಸಿನ 30 ಸ್ಮಾರ್ಟ್‌ಫೋನ್ ಬಳಕೆದಾರರನ್ನು ಬಗ್ಗೆ ಅಧ್ಯಯನ ನಡೆಸಿದ ವೇಳೇಯಲ್ಲಿ ಕುತ್ತಿಗೆ. ಸೊಂಟ, ನೋವಿಗೆ ಕಾರಣವಾಗಬಹುದು ಎನ್ನಲಾಗಿದೆ.

ದಕ್ಷತಾಶಾಸ್ತ್ರದ ಅಪಾಯದ ಮಟ್ಟವನ್ನು ಅಳೆಯಲು ರಾಪಿಡ್ ಅಪ್ಪರ್ ಲಿಂಬ್ ಅಸೆಸ್ಮೆಂಟ್ ಟೂಲ್ (ರುಲಾ) ಅನ್ನು ಬಳಸಲಾಗಿದೆ. ಈ ಹಿಂದೆ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ದಕ್ಷತಾಶಾಸ್ತ್ರದ ಪರಿಣಾಮಗಳನ್ನು ನಿರ್ಣಯಿಸಲು ರುಲಾವನ್ನು ಬಳಸಲಾಗುತ್ತಿತ್ತು ಆದರೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯ ದಕ್ಷತಾಶಾಸ್ತ್ರದ ಅಪಾಯದ ಮಟ್ಟವನ್ನು ನಿರ್ಣಯಿಸಲು ಈ ಉಪಕರಣವನ್ನು ಬಳಸುವುದು ಇದೇ ಮೊದಲು ಎಂದು ನಂಬಲಾಗಿದೆ. ಸ್ಮಾರ್ಟ್ಫೋನ್ ಬಳಕೆದಾರರು ಪಠ್ಯ ಸಂದೇಶಗಳನ್ನು ಓದುವಾಗ ಮತ್ತು ಬರೆಯುವಾಗ ಸಾಮಾನ್ಯವಾಗಿ ತಮ್ಮ ಕುತ್ತಿಗೆಯನ್ನು ಸ್ವಲ್ಪ ಮುಂದಕ್ಕೆ ಬಾಗಿಸುತ್ತಾರೆ. ಅವರು ಕೆಲವೊಮ್ಮೆ ಕುತ್ತಿಗೆಯನ್ನು ಬದಿಗೆ ಬಾಗಿಸಿ ತಿರುಗಿಸುತ್ತಾರೆ ಮತ್ತು ಅವರ ಮೇಲಿನ ದೇಹ ಮತ್ತು ಕಾಲುಗಳನ್ನು ವಿಚಿತ್ರವಾಗಿ ಇಡುತ್ತಾರೆ. ಇದು ಸಮಸ್ಯೆಯನ್ನು ತರುತ್ತದೆ ಎನ್ನಲಾಗಿದೆ.  ಈ ಭಂಗಿಗಳು ಬೆನ್ನುಮೂಳೆಯ ಸುತ್ತಲಿನ ಮೃದು ಅಂಗಾಂಶಗಳ ಮೇಲೆ ಒತ್ತಡವನ್ನು ಬೀರುತ್ತವೆ, ಅದು ಅಸ್ವಸ್ಥತೆಗೆ ಕಾರಣವಾಗಬಹುದು” ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಮಸ್ಕ್ಯುಲೋಸ್ಕೆಲಿಟಲ್ ಕಾಯಿಲೆಗಳು ಹೆಚ್ಚಾಗಿ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆಯನ್ನು ಮಾಡುವ ವಿದ್ಯಾರ್ಥಿಗಳಲ್ಲಿ (ದಿನಕ್ಕೆ ಐದು ಗಂಟೆಗಳಿಗಿಂತ ಹೆಚ್ಚು) ಮತ್ತು ಧೂಮಪಾನ ಮಾಡುವ ಮತ್ತು ಕಡಿಮೆ ವ್ಯಾಯಾಮ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions