ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಗಣೇಶನು ವಕ್ರತುಂಡನಾಗಿದ್ದಕ್ಕೆ ಹಲವಾರು ಕಥೆ ಇದೆ. ಒಂದು ಚಂದ್ರ ಅಪಹಾಸ್ಯ ಮಾಡಿದಾಗ ದಂತ ಕತ್ತರಿಸಿದ್ದು ಮತ್ತೊಂದು ಮಹಾಭಾರತ ಬರೆಯುವಾಗ ಕತ್ತರಿಸಿದು. ಈ ಎರಡು ಕತೆಗಳ ಬಗ್ಗೆ ನಾವಿಲ್ಲಿ ನಿಮಗೆ ಹೇಳುತ್ತೇವೆ.

ವೇದವ್ಯಾಸರು ಮಹಾಭಾರತವನ್ನು ಬರೆಯುವಾಗ ತಾವು ಹೇಳುವ ಶ್ಲೋಕಗಳನ್ನು ಬರೆಯಲು ಗಣೇಶನೇ ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಅವನನ್ನು ಕೇಳಲು, ಗಣೇಶನು ವ್ಯಾಸರು ಸ್ವಲ್ಪವೂ ನಿಲ್ಲಿಸದೆ ಶ್ಲೋಕಗಳನ್ನು ಹೇಳಿದಲ್ಲಿ ಮಾತ್ರ ತಾನು ಬರೆಯುವುದಾಗಿ ತಿಳಿಸಿದನಂತೆ. ಅದಕ್ಕೆ ಪ್ರತಿಯಾಗಿ ವ್ಯಾಸರು ತಾವು ಹೇಳುವ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ ಮಾಡಿಕೊಂಡು ಬರೆಯಬೇಕೆಂದು ಶರತ್ತು ವಿಧಿಸಿದರಂತೆ. ಬರವಣಿಗೆ ಸಾಗುತ್ತಿರಲು ಲೇಖನಿಯಾದ ನವಿಲುಗರಿ ಮುರಿಯಿತು. ಕೂಡಲೆ ಗಣೇಶನು ತನ್ನ ದಂತವನ್ನು ಮುರಿದುಕೊಂಡು ಬರವಣಿಗೆಯನ್ನು ಮುಂದುವರೆಸಿದನು. ಹೀಗಾಗಿ ಅವನ ದಂತವು ತುಂಡಾಯಿತು ಎಂದೂ ಕಥೆಯಿದೆ.

ಮತ್ತೊಂದು ಕತೆ ಗಣೇಶನು ಹೊಟ್ಟೆ ತುಂಬಾ ತಿಂದು ಇಳಿಯನ್ನೇರಿ ಬರುತ್ತಿರಲು, ಹಾವನ್ನು ಕಂಡ ಇಲಿ ಹೆದರಿ ಓಡಿದಾಗ ಗಣಪತಿ ಕೆಳಗೆ ಬಿದ್ದನಂತೆ. ಆ ಸಮಯದಲ್ಲಿ ಚಂದ್ರನು ಇದನ್ನು ನೋಡಿ ಜೋರಾಗಿ ನಗಲು ಗಣೇಶನಿಗೆ ಕೋಪ ಬಂದು ತನ್ನ ದಂತವನ್ನು ಅರ್ಧ ತುಂಡು ಮಾಡಿ ಎಸೆದನಂತೆ. ಇದರಿಂದ ಆತ ವಕ್ರ ತುಂಡನಾದ ಎಂದು ಹೇಳಲಾಗುತ್ತದೆ.

Share.
Exit mobile version