ಬೆಂಗಳೂರು: ನಗರ ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಮನೆ ಮಾಲೀಕರಿಗೆ ಬಿಬಿಎಂಪಿ ಶಾಕ್‌ ನೀಡಿದೆ. 29 ಕಟ್ಟಡಗಳ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದೆ.

HEALTH TIPS: ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ವೈದ್ಯರ ಸಲಹೆ| Chewing Clove

ಮಳೆಯಿಂದ ನಗರಲ್ಲಿ ಭಾರಿ ಅವಾಂತರ ಸೃಷ್ಟಿಸಿತ್ತು. ಹೀಗಾಗಿ ಬಿಬಿಎಂಪಿ ರಾಜಕಾಲುವೆ, ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿತ್ತು. ಆದರೆ, ಕೆಲ ಕಟ್ಟಡ ಮಾಲೀಕರು ಬಿಬಿಎಂಪಿ ನಡೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ನೀಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಎದಿರೇಟು ನೀಡಿರುವ ಬಿಬಿಎಂಪಿ, ತನ್ನ ಅಭಿಪ್ರಾಯವೂ ಪಡೆಯಬೇಕೆಂದು ಹೈಕೋರ್ಟಿಗೆ ಕೇವಿಯಟ್‌ ಅರ್ಜಿ ಸಲ್ಲಿಸಿದೆ.

HEALTH TIPS: ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ವೈದ್ಯರ ಸಲಹೆ| Chewing Clove

ಇದರ ನಡುವೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅವರು ತಡೆ ಪಡೆದ 29 ಆಸ್ತಿಗಳ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದ್ದಾರೆ.ಒತ್ತುವರಿ ತೆರವು ಕಾರ್ಯಾಚರಣೆಯ ವಿರುದ್ಧ 61 ಆಸ್ತಿ ಮಾಲೀಕರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕೇವಿಯಟ್ ಅರ್ಜಿ ಸಲ್ಲಿಸಲು ಆದೇಶಿಸಿದ್ದರು.

Share.
Exit mobile version