ಸುಭಾಷಿತ :

Wednesday, January 29 , 2020 9:36 PM

ಪ್ರಪಂಚದ ಮೋಸ್ಟ್ ಹಾಂಟೆಡ್ ತಾಣಗಳಲ್ಲಿ ಈ ದ್ವೀಪವೂ ಒಂದು…


Monday, December 9th, 2019 9:17 am

ಸ್ಪೆಷಲ್ ಡೆಸ್ಕ್ : ಐಲ್ಯಾಂಡ್ ಎಂದರೆ ಮೋಜು ಮಸ್ತಿ ಮಾಡುವ ತಾಣ ಎನ್ನಲಾಗುತ್ತದೆ. ಆದರೆ ಇಲ್ಲೊಂದು ಐಲ್ಯಾಂಡ್ ಭಯಾನಕತೆಗೆ ಜನಪ್ರಿಯವಾಗಿದೆ. ಇಲ್ಲಿಗೆ ಹೋದವರು ಹಿಂದಿರುಗಿ ಬಂದ ಉದಾಹರಣೆ ಇಲ್ಲ ಎನ್ನಲಾಗುತ್ತದೆ. ಆ ದ್ವೀಪ ಎಲ್ಲಿದೆ ನೋಡೋಣ…

ಇಟಲಿಯಲ್ಲಿದೆ ಆ ದ್ವೀಪ. ಈ ಭಯಾನಕ ದ್ವೀಪದ ಹೆಸರು ಪೊವೆಗಲಿಯಾ ದ್ವೀಪ. ಈ ಐಲ್ಯಾಂಡ್‌ ಸದ್ಯ ಜನರ ಸಂಪರ್ಕವೇ ಇಲ್ಲದೆ ಕೇವಲ ಭಯಾನಕ ತಾಣವಾಗಿ ಉಳಿದಿದೆ. ಈ ಐಲ್ಯಾಂಡ್‌ನಲ್ಲಿ ಜನರು ಕಿರುಚಾಡುವ ಶಬ್ಧ ಕೇಳಿಸುತ್ತದೆ ಎನ್ನಲಾಗುತ್ತದೆ.
ಕೆಲವು ವರ್ಷದವರೆಗೂ ಈ ತಾಣಕ್ಕೆ ಜನರು ರಜೆಯನ್ನು ಎಂಜಾಯ್ ಮಾಡಲು ಬರುತ್ತಿದ್ದರಂತೆ. ಆದರೆ ಇಂದು ಅದೆಲ್ಲಾ ಬದಲಾಗಿದೆ. ಇಂದು ಅಲ್ಲಿ ಕೇವಲ ನಿಶ್ಯಬ್ಧ, ಭಯಾನಕ ನೀರವತೆ ಕಾಡುತ್ತಿದೆ. ಆ ಬಗ್ಗೆ ಇಲ್ಲಿದೆ ಒಂದಿಷ್ಟು ಕುತೂಹಲದ ಮಾಹಿತಿ.

ಸುಮಾರು ವರ್ಷದ ಹಿಂದೆ ಈ ದ್ವೀಪದಲ್ಲಿ ಸಾವಿರಾರು ಜನರನ್ನು ಜೀವಂತವಾಗಿ ಸುಡಲಾಗಿತ್ತು. ಆ ಸಮಯದಲ್ಲಿ ಈ ಐಲ್ಯಾಂಡ್‌ಗೆ ಪ್ರವಾಸಕ್ಕೆ ತೆರಳುತ್ತಿದ್ದ ಜನರು ಅಲ್ಲಿ ಮಾನಸಿಕವಾಗಿ ಏನಾದರೊಂದು ಸಮಸ್ಯೆಗೆ ಈಡಾಗಿ ಹಿಂದಿರುಗಿ ಬಂದೆ ಇಲ್ಲವಂತೆ.

ಹಲವಾರು ವರ್ಷಗಳ ಹಿಂದೆ ಈ ಐಲ್ಯಾಂಡ್‌ನಲ್ಲಿ ಪ್ಲೇಗ್‌ ರೋಗಿಗಳನ್ನು ತಂದು ಬಿಡಲಾಗುತ್ತಿತ್ತು. ಅಲ್ಲದೆ ಯಾವ ಜನರು ಸಾವನ್ನಪ್ಪುತ್ತಿದ್ದರು, ಅವರನ್ನು ಇಲ್ಲಿಯೆ ಸುಡಲಾಗುತ್ತಿತ್ತು.

ಇಲ್ಲಿ ಹಲವಾರು ಹೆಣಗಳು ತುಂಬಿಕೊಂಡ ಕಾರಣ ಅಲ್ಲಿನ ಜನರಿಗೆ ಲೀಶ್ಮೇನಿಯಾಸಿಸ್ ಎಂಬ ಜ್ವರ ಹರಡಿತ್ತು. ಈ ರೋಗ ಮುಂದೆ ಯಾರಿಗೂ ಹರಡಬಾರದು ಎಂಬ ಕಾರಣದಿಂದಾಗಿ ಒಂದು ಲಕ್ಷದ 60 ಸಾವಿರ ರೋಗಿಗಳನ್ನು ಜೀವಂತವಾಗಿ ಅಲ್ಲಿ ಸುಡಲಾಯಿತು ಎನ್ನಲಾಗಿದೆ.

ಕೆಲವು ಸಮಯದ ನಂತರ ಈ ಐಲ್ಯಾಂಡ್‌ಗೆ ಹೋಗುವ ಜನರಿಗೆ ಭೂತ ಕಾಣಲು ಆರಂಭವಾಯಿತು. ಆದರೆ ಇದು ಅವರ ಭ್ರಮೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ 1922ರಲ್ಲಿ ಅಲ್ಲಿ ಮೆಂಟಲ್‌ ಆಸ್ಪತ್ರೆಯನ್ನು ತೆರೆಯಲಾಯಿತು. ಆದರೆ ಈ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಭೂತ ಕಾಣಿಸತೊಡಗಿತು. ಅಷ್ಟೇ ಅಲ್ಲ ಅಲ್ಲಿ ನರ್ಸ್‌ ಮತ್ತು ವೈದ್ಯರಿಗೂ ಸಹ ಹಲವಾರು ಚಿತ್ರ ವಿಚಿತ್ರ ಅನುಭವ ಉಂಟಾಗಿ ಕೊನೆಗೆ ಆಸ್ಪತ್ರೆಯನ್ನೇ ಬಂದ್ ಮಾಡಲಾಯಿತು. ಭೂತ ಪ್ರೇತದ ಭಯದಿಂದ ಆ ದ್ವೀಪಕ್ಕೆ ಹೋಗುವುದೇ ನಿಂತುಹೋಯಿತು. ಇದೀಗ ಭಯಾನಕ ದ್ವೀಪವಾಗಿ ಉಳಿದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions