ಸುಭಾಷಿತ :

Wednesday, January 29 , 2020 9:39 PM

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ : ಸಿಂಧೂ, ಪ್ರಣಯ್, ಕಶ್ಯಪ್ ಗೆ ಸೋಲು


Friday, November 15th, 2019 10:50 am

ಹಾಂಕಾಂಗ್‌: ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ 2019 ಟೂರ್ನಿಯಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧೂ ಸೋಲು ಅನುಭವಿಸುವ ಮೂಲಕ ಮತ್ತೊಮ್ಮೆ ನಿರಾಶೆ ಮೂಡಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿಕೊಂಡಿದ್ದ ವಿಶ್ವದ 6ನೇ ಶ್ರೇಯಾಂಕದ ಆಟಗಾರ್ತಿ ಪಿ.ವಿ ಸಿಂಧೂ ಗುರುವಾರ 2ನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್ಫನ್‌ ಎದುರು 18-21, 21-11, 16-21 ಗೇಮ್‌ಗಳಿಂದ ಸೋತು ಸ್ಪರ್ಧೆಯಿಂದ ಹೊರಬಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌ ಪ್ರಣಯ್‌ 12-21, 19-21 ಗೇಮ್‌ಗಳಿಂದ ಎರಡನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟೀ ವಿರುದ್ಧ ಸೋತರು. ಇದೇ ವೇಳೆ, ಪರುಪಳ್ಳಿ ಕಶ್ಯಪ್‌ 2ನೇ ಶ್ರೇಯಾಂಕದ ಆಟಗಾರ ಚೈನಾ ತೈಪೆಯ ಚೌ ತಿಯೆನ್‌ ಚೆನ್‌ ಎದುರು 21-12, 21-23, 10-21 ಗೇಮ್‌ಗಳಿಂದ ಸೋತು ಸ್ಪರ್ಧೆ ಮುಗಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions