ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿ ಬೆಳ್ಳಾರೆಯಲ್ಲಿ ಕೊಲೆಯಾಗಿದ್ದಂತ ಪ್ರವೀಣ್ ನೆಟ್ಟಾರು ಹತ್ಯೆ ಕುರಿತಂತೆ ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಹೆತ್ಯೆಗೈದಿದ್ದು ಕೇರಳಿಗಲ್ಲ. ಬದಲಾಗಿ ಸ್ಥಳೀಯರೇ ಎಂಬುದಾಗಿ ಹೇಳಿದ್ದಾರೆ.

BREAKING NEWS : ಉದ್ಯೋಗಿಗಳಿಗೆ ಬಿಗ್‌ ಶಾಕ್‌ ; ‘100 ಉದ್ಯೋಗಿ’ಗಳನ್ನ ಕೆಲಸದಿಂದ ವಜಾಗೊಳಿಸಿದ ‘ವೇದಾಂತು, ಲೀಡ್ ಸ್ಕೂಲ್’

ಈ ಕುರಿತಂತೆ ಖಾಸಗಿ ಸುದ್ದಿವಾಹಿನಿಗೆ ನೀಡಿರುವಂತ ಸಂದರ್ಶನದಲ್ಲಿ ಮಾತನಾಡಿರುವಂತ ಅವರು, ಜುಲೈ.26ರಂದು ರಾತ್ರಿ ಪ್ರವೀಣ್ ನೆಟ್ಟಾರು ಕೊಲೆಯಾಗಿತ್ತು. ಬೆಳ್ಳಾರೆ ಗ್ರಾಮದಲ್ಲಿಯೇ ಹತ್ಯೆ ಮಾಡಲಾಗಿದೆ. ಕೊಂದವರು ಕೇರಳದವರು ಎನ್ನಲಾಗಿತ್ತು. ಆದ್ರೇ ಪ್ರವೀಣ್ ನೆಟ್ಟಾರು ಕೊಂದವರು ಸ್ಥಳೀಯರು, ಕೇರಳದವರು ಅಲ್ಲ ಎಂಬುದಾಗಿ ಹೇಳಿದ್ದಾರೆ.

BIG NEWS: ‘ಜೆಡಿಎಸ್’ನ ಮತ್ತೊಂದು ವಿಕೆಟ್ ಪತನ: ಅಗಿಲೆ ಯೋಗೀಶ್ ಎಎಪಿ ಸೇರ್ಪಡೆ

ಅಂದಹಾಗೇ ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಾರುವಿನಲ್ಲಿ ಪ್ರವೀಣ್ ಹತ್ಯೆಯಾದ ಬಳಿಕ, ಬೆಳ್ಳಾರೆಯಲ್ಲಿ ಬಂದ್ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಕಾರ್ಯಕರ್ತರು ಬಿಜೆಪಿ ಸ್ಥಳೀಯ ಸಂಘಟನೆಗಳಿಗೆ ರಾಜೀನಾಮೆ ಕೂಡ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಇಂದು ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ.

Share.
Exit mobile version