ಸುಭಾಷಿತ :

Monday, February 24 , 2020 1:58 PM

ನಿಮ್ಮ ಹೊಕ್ಕಳಲ್ಲಿ ನಿಮ್ಮ ಸೌಂದರ್ಯ ಅಡಗಿದೆ..! ಇಲ್ಲಿದೆ ನೋಡಿ ಟಿಪ್ಸ್


Thursday, January 9th, 2020 3:25 pm

ಸ್ಪೆಷಲ್ ಡೆಸ್ಕ್: ನಿಮ್ಮ ಸೌಂದರ್ಯದ ಗುಟ್ಟು ನಿಮ್ಮ ಹೊಕ್ಕಳಲ್ಲೇ ಅಡಗಿದೆ..! ಹೌದು. ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕೆಮಿಕಲ್ ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚಿ ಪ್ರಯೋಗಿಸುತ್ತೀವಿ. ಆದರೆ ಅದರಿಂದ ಮುಖದ ಕಾಂತಿ ಬರಬಹುದು, ಬಾರದೇ ಇರಬಹುದು. ಇದಕ್ಕಾಗಿ ನೀವು ಈ ಪುರಾತನ ಮಾರ್ಗವನ್ನು ಅನುಸರಿಸಿದರೆ ಸಾಕು, ನಿಮ್ಮ ಹೊಕ್ಕಳಿನ ಮೂಲಕವೇ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು.

ಬೇವಿನ ಎಣ್ಣೆ : ನಿಮ್ಮ ಮುಖದಲ್ಲಿ ಮೊಡವೆಗಳು ಮೂಡುತ್ತಿದ್ದಲ್ಲಿ ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತದೆ.

ತುಪ್ಪ: ನಯವಾದ, ಕೋಮಲವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಲು ಹೊಕ್ಕಳಿಗೆ ತುಪ್ಪ ಹಚ್ಚಿ ಸಾಕು. ತುಪ್ಪದಂತೆಯೇ ನಯವಾದ ಕೋಮಲವಾದ ಚರ್ಮ ನೀವು ಪಡೆಯಬಹುದು.

ಬಾದಾಮಿ ಎಣ್ಣೆ : ನಿಮ್ಮ ಹೊಕ್ಕಳಿಗೆ ಬಾದಾಮಿ ಎಣ್ಣೆ ಹಚ್ಚಿ. ಹೀಗೆ ಕೆಲ ದಿನಗಳ ಕಾಲ ಇದನ್ನು ಅಭ್ಯಾಸ ಮಾಡಿ ನೋಡಿ. ನಿಮ್ಮ ಮುಖ ಫಳಫಳನೆ ಹೊಳೆಯುತ್ತದೆ.

ಸಾಸಿವೆ ಎಣ್ಣೆ: ಆಗಾಗ ತುಟಿ ಒಡೆಯುವ ಸಮಸ್ಯೆ ಕಾಣುತ್ತಿದ್ದರೆ ಯಾವುದೇ ರೀತಿಯ ಜೆಲ್ ಗಳನ್ನೂ ಹಚ್ಚದೆ, ಹೊಕ್ಕಳಿಗೆ ಸಾಸಿವೆ ಎಣ್ಣೆ ಹಚ್ಚಿ ಸಾಕು. ಈ ಸಮಸ್ಯೆಯಿಂದ ಖಂಡಿತ ಪರಿಹಾರ ಸಿಗುತ್ತದೆ.

ನಿಂಬೆ ರಸ: ಹೊಕ್ಕಳಿಗೆ ನಿಂಬೆ ರಸ ಸವರಿದರೆ ಹೇರಳವಾದ ಲಾಭ ನಿಮ್ಮದಾಗುತ್ತದೆ. ದೇಹ ತಂಪಾಗುತ್ತದೆ.
ಜೊತೆಗೆ ನಿಮ್ಮ ಮುಖದ ಕಲೆಗಳು ಮಾಯವಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions