ಬೆಂಗಳೂರು : ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗೆ ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ.

ಪ್ರೌಢಶಾಲೆಗಳ ಶಿಕ್ಷಕರ ಕೊರತೆ ಇದ್ದರೆ ಮಾತ್ರ ಪ್ರಾಥಮಿಕ ಶಿಕ್ಷಕರನ್ನು ಪರಿಗಣಿಸಬೇಕು. ಪರೀಕ್ಷೆ ಇರುವ ವಿಷಯದ ದಿನದಂದ ಸಂಬಂಧಿಸಿದ ವಿಷಯದ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ  ನೇಮಿಸಬಾರದು. ತರಬೇತಿ ಹೊಂದಿದ ಪದವೀಧರ ಶಿಕ್ಷಕರನ್ನು ಗಣಿತ ಮತ್ತು ವಿಜ್ಞಾನದ ವಿಷಯದ ಪರೀಕ್ಷೆ ನಡೆಯುವ ದಿನಗಳಂದು ಕೊಠಡಿ ಮೇಲ್ವಿಚಾರಕರನ್ನಾಗಿ ಎಂದು ಸೂಚನೆ ನೀಡಲಾಗಿದೆ.

ಇನ್ನು ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಕೇಂದ್ರಗಖಳ ಮೇಲ್ವಿಚಾರಕರಿಗೆ ನಾಳೆಯಿಂದ ತರಬೇತಿ ನೀಡಲಾಗುತ್ತಿದೆ.  ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಆಯ್ದ ಮುಖ್ಯ ಅಧೀಕ್ಷಕರು, ತಾಲೂಕು ನೋಡಲ್‌  ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ.

Share.
Exit mobile version