ಬೆಳಗಾವಿ: ನಾಳೆ (ಡಿ.6) ಮಹಾರಾಷ್ಟ್ರ ಸಚಿವರ ಭೇಟಿ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಮುಂಜಾಗೃತಾ ಕ್ರಮವಾಗಿ ಯಾವುದೇ ಅನಾಹುತ ನಡೆಯದಂತೆ 21 ಕಡೆ ಚೆಕ್ ಪೋಸ್ಟ್ ಹಾಕಲಾಗಿದ್ದು, 5 ಡಿಎಆರ್ ತುಕಡಿ, 30 ಪಿಎಸ್ಐ ಸೇರಿ 450 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟ್ ನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರು ಪುಣೆ ಹೆದ್ದಾರಿಯಲ್ಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬೆಳಗಾವಿ ಎಸ್ ಪಿ ಡಾ ಸಂಜೀವ್ ಎಂ ಪಾಟೀಲ್ ನೇತೃತ್ವದಲ್ಲಿ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ. ಗಡಿಯಲ್ಲಿ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ಇಲ್ಲ
ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡೋದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್ ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡೋದಿಲ್ಲ, ಮಹಾಜನ್ ವರದಿ ಎಂದು ಸುಪ್ರೀಂ ಹೇಳಿದೆ, ದಾಖಲೆ ಜನಾಭಿಪ್ರಾಯ ಎಲ್ಲಾ ನಮ್ಮ ಕಡೆ ಇದೆ, ನೆಲ ಜಲ ಭಾಷೆ ವಿಚಾರ ಬಂದಾಗ ನಾವು ಬದ್ದ, ಸಚಿವರ ಭೇಟಿಗೆ ಪ್ರತಿಯಾಗಿ ನಾವು ರಣತಂತ್ರ ಮಾಡುತ್ತೇವೆ, ಮಹಾರಾಷ್ಟ್ರ ಸಚಿವರು ಸ್ಟಂಟ್ ಮಾಸ್ಟರ್ಸ್ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಇದರ ನಡುವೆ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ರದ್ದಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಸಚಿವರ ಭೇಟಿ ವಿರೋಧಿಸಿ ಬೆಳಗಾವಿಯಲ್ಲಿ ಭಾರೀ ಪ್ರತಿಭಟನೆ ನಡೆದಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ | Hansika Motwani Marriage

BJP Karnataka: ‘ಗೋ ಹತ್ಯೆ’ಯಾದರೂ ‘ಬೀಫ್ ಮಾರ್ಕೆಟ್’ ನಿಲ್ಲಬಾರದೆಂದ ಹರಿಕಾರ‌ ‘ಸಿದ್ಧರಾಮಯ್ಯ’ – ಟ್ವಿಟ್ ನಲ್ಲಿ ಬಿಜೆಪಿ ವಾಗ್ಧಾಳಿ

Share.
Exit mobile version