ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಉತ್ತಮ ಆರೋಗ್ಯದಿಂದ ಇರಬೇಕು ಅಂತಾ ನಾನಾ ಕಸರತ್ತು ಮಾಡುತ್ತೇವೆ. ಆಹಾರ ಪದ್ದತಿಯಲ್ಲಿ, ಜ್ಯೂಸ್‌ ಮತ್ತು ವ್ಯಾಯಾಮ ಅಂತೆಲ್ಲ ಮಾಡುತ್ತೀವಿ. ಆದರೆ ನಮಗೆ ಅಡುಗೆಗೆ ಬಳಸುವ ಎಣ್ಣೆ ಕೂಡ ಹೃದಯಾಘಾತಕ್ಕೆ ಪ್ರಮುಖ ಕಾರಣ ಎಂದು ಗೊತ್ತಿಲ್ಲ. ನಾವು ಬಳಸುವ ಅಡುಗೆ ಎಣ್ಣೆಗಳ ಅಂಶಗಳು ಹೃದಯದ ಅಪಧಮನಿಗಳಲ್ಲಿ ಕೊಬ್ಬನ್ನು ಸಂಗ್ರಹಿಸಬಹುದು. ಈ ಕೊಬ್ಬು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

BIGG NEWS: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ : ಹತ್ಯೆ ಆಗಿದ್ದು ನಮಗೂ ನೋವು ಇದೆ; ರಾಜೀನಾಮೆ ಕೊಡುವ ಬದಲು ಒಗ್ಗಟ್ಟಾಗಿರಬೇಕು- ಕೆ.ಎಸ್‌ ಈಶ್ವರಪ್ಪ

 

ಎಣ್ಣೆಯನ್ನು ಅತಿಯಾಗಿ ಬಿಸಿ ಮಾಡುವುದರಿಂದ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಹಾನಿಯುಂಟಾಗುತ್ತದೆ. ಅಡುಗೆ ಎಣ್ಣೆಗಳ ಹೆಚ್ಚಿನ ಉಷ್ಣತೆಯು ಆಹಾರದಲ್ಲಿನ ಪೋಷಕಾಂಶಗಳನ್ನು ನಾಶಪಡಿಸುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಯಾವ ಅಡುಗೆ ಎಣ್ಣೆ ಬಳಸಿದ್ರೆ ಆರೋಗ್ಯ ಸಿಗುತ್ತದೆ ಎಂಬುದು ತಿಳಿದುಕೊಳ್ಳೊಣ
* ಸೂರ್ಯಕಾಂತಿ ಎಣ್ಣೆ: ಇದರಲ್ಲಿ ವಿಟಮಿನ್ ಇ ಇರುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚು ಬಿಸಿ ಮಾಡದಂತೆ ಶಿಫಾರಸು ಮಾಡಲಾಗಿದೆ.
* ಸೋಯಾಬೀನ್ ಎಣ್ಣೆ: ಈ ಎಣ್ಣೆಯು ದೇಹದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸಲು ಸಹಾಯಕವಾಗಿದೆ.

BIGG NEWS: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ : ಹತ್ಯೆ ಆಗಿದ್ದು ನಮಗೂ ನೋವು ಇದೆ; ರಾಜೀನಾಮೆ ಕೊಡುವ ಬದಲು ಒಗ್ಗಟ್ಟಾಗಿರಬೇಕು- ಕೆ.ಎಸ್‌ ಈಶ್ವರಪ್ಪ

 

*ಆಲಿವ್ ಎಣ್ಣೆ: ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಇತರ ಹೃದಯ-ಆರೋಗ್ಯಕರ ಪೋಷಕಾಂಶಗಳನ್ನು ಒಳಗೊಂಡಿದೆ.
*ಆವಕಾಡೊ ಎಣ್ಣೆ: ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಇ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ.ಇದರಿಂದ ಹೃದಯ ಸಂಬಂಧಿಸಿದ ಖಾಯಿಲೆಗಳು ದೂರು ಇರುತ್ತದೆ.

Share.
Exit mobile version