ಬೆಂಗಳೂರು: ಇಂದು ಕರ್ನಾಟಕದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನ ಸಂಜೆ 6 ಗಂಟೆಗೆ ಮುತ್ತಾಯವಾಗಿದೆ. ಹಾಗಾದ್ರೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಕ್ಷೇತವಾರು ವಿವರ ಮುಂದೆ ಓದಿ.

ಕೇಂದ್ರ ಚುನಾವಣಾ ಆಯೋಗದ ಮಾಹಿತಿಯಂತೆ ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ. ಇದರಲ್ಲಿ ಅತಿ ಕಡಿಮೆ ಬೆಂಗಳೂರು ಸೆಂಟ್ರಲ್‌ನಲ್ಲಿ 49 ಪರ್ಸೆಂಟ್ ವೋಟಿಂಗ್ ಆಗಿದೆ.

ಬೆಂಗಳೂರು ಉತ್ತರದಲ್ಲಿ 51 ಪರ್ಸೆಂಟ್, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 61ರಷ್ಟು ಮತದಾನವಾಗಿದೆ. ಇನ್ನೂ ಬೆಂಗಳೂರು ದಕ್ಷಿಣದಲ್ಲಿ 49ರಷ್ಟು ವೋಟಿಂಗ್ ಆಗಿದೆ. ಚಾಮರಾಜನಗರದಲ್ಲಿ 69, ಚಿಕ್ಕಬಳ್ಳಾಪುರದಲ್ಲಿ 71, ಚಿತ್ರದುರ್ಗದಲ್ಲಿ 67, ದಕ್ಷಿಣ ಕನ್ನಡದಲ್ಲಿ 72, ಹಾಸನದಲ್ಲಿ ಶೇ.72ರಷ್ಟು ಮತದಾನವಾಗಿದೆ.

ಇನ್ನೂ ಕೋಲಾರದಲ್ಲಿ 73ರಷ್ಟು ಮತದಾನವಾಗಿದೆ. ಇನ್ನೂ ಮಂಡ್ಯದಲ್ಲಿ ಅತಿ ಹೆಚ್ಚು ಅಂದ್ರೆ, 74.87ರಷ್ಟು ವೋಟಿಂಗ್ ಆಗಿದೆ. ಮೈಸೂರಲ್ಲಿ 66, ತುಮಕೂರು ಮತ್ತು ಚಿಕ್ಕಮಗಳೂರಲ್ಲಿ 72ರಷ್ಟು ಮತದಾನವಾಗಿದೆ.

ಈ ಕೆಲಸ ಮಾಡಿದ್ರೇ ನಿಮ್ಮ ಗಂಡ ಶ್ರೀಮಂತ, ಉದ್ದಾರ ಆಗೋದು ಗ್ಯಾರಂಟಿ

ಈ ಕೆಲಸ ಮಾಡಿದ್ರೇ ನಿಮ್ಮ ಗಂಡ ಶ್ರೀಮಂತ, ಉದ್ದಾರ ಆಗೋದು ಗ್ಯಾರಂಟಿ

Share.
Exit mobile version