ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬರೂ ಹೊಳೆಯುವ ಚರ್ಮವನ್ನು ಇಷ್ಟಪಡುತ್ತಾರೆ. ಆದರೆ ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ, ಕಳಪೆ ಆಹಾರ ಪದ್ಧತಿಗಳಿಂದ ಚರ್ಮದ ಹೊಳಪು ಮಸುಕಾಗುತ್ತದೆ. ಆದರೆ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.
ಇಲ್ಲಿವೆ ಸಿಂಪಲ್ ಮನೆಮದ್ದುಗಳು
ಬಾಳೆಹಣ್ಣು – ಜೇನು ಫೇಸ್ ಪ್ಯಾಕ್
ಒಂದು ಬಟ್ಟಲಿನಲ್ಲಿ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ ಜೇನುತುಪ್ಪ ಸೇರಿಸಿ. ಬಳಿಕ ಈ ಮಿಶ್ರಣದಿಂದ ಮುಖವನ್ನು ಮಸಾಜ್ ಮಾಡಬೇಕು. ಸುಮಾರು 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು.
ಅರಿಶಿನ ಮತ್ತು ಹಾಲು
ಅರಿಶಿನ ಪುಡಿ ಮತ್ತು ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಬೇಕು. ಹೀಗೆ ವಾರಕ್ಕೆ ಒಂದು ಬಾರಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಅಲೋವೆರಾ, ಸೌತೆಕಾಯಿ
ಅಲೋವೆರಾ ಜೆಲ್ ಮತ್ತು ಸೌತೆಕಾಯಿ ಎರಡು ಆರೋಗ್ಯಕರ ಪದಾರ್ಥಗಳಾಗಿವೆ. ಇವೆರಡ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ಇದನ್ನು ಮುಖದ ಮೇಲೆ ಹಚ್ಚಿ, ಸುಮಾರು 20 ನಿಮಿಷಗಳ ನಂತರ ಶುದ್ಧ ನೀರಿನಿಂದ ತೊಳೆಯ ಬೇಕು.
ಪಪ್ಪಾಯಿ- ಜೇನು ಫೇಸ್ ಪ್ಯಾಕ್
ಇದಕ್ಕಾಗಿ, ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ, ಅದಕ್ಕೆ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ ಮತ್ತು 15-20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಬೇಕು.
ನಿಂಬೆ -ಜೇನುತುಪ್ಪದ ಪ್ಯಾಕ್
ನಿಂಬೆ ರಸ ಹಾಗೂ ಜೇನುತುಪ್ಪ ಕಾಂತಿಯನ್ನು ಹೆಚ್ಚಿಸಲು ಮತ್ತು ಕಲೆಗಳನ್ನು ಹೋಗಲಾಡಿಸುವ ಕೆಲಸ ಮಾಡುತ್ತವೆ.ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ, ಸುಮಾರು 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಶ್ರೀಗಂಧ
ಶ್ರೀಗಂಧದ ಪುಡಿಗೆ ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು. ಹೀಗೆ ವಾರಕ್ಕೆ ಒಮ್ಮೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಕಡಲೆ ಹಿಟ್ಟು- ಅರಿಶಿನ
ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಹಾಲು ಮತ್ತು ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಬೇಕು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಬೇಕು. ಸುಮಾರು 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು.
ಈ ನೈಸರ್ಗಿಕ ಪದಾರ್ಥಗಳು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಇದರಲ್ಲಿ ಯಾವುದಾರರು ವಸ್ತುಗಳು ಅಲರ್ಜಿ ಅನಿಸಿದ್ರೆ ಅದನ್ನು ಮುಖಕ್ಕೆ ಬಳಸಬಾರದು.
BREAKING NEWS : ಏ.11 ರವರೆಗೆ ಶಾಸಕ ‘ಮಾಡಾಳ್ ವಿರೂಪಾಕ್ಷಪ್ಪ’ಗೆ ನ್ಯಾಯಾಂಗ ಬಂಧನ
ಮೂರೇ ದಿನಗಳಲ್ಲಿ ‘ಪಾಸ್ ಪೋರ್ಟ್’ ಲಭ್ಯ, ಯಾವ ‘ದಾಖಲೆ’ಗಳು ಅಗತ್ಯ.? ಇಲ್ಲಿದೆ ಮಾಹಿತಿ
BIGG NEWS : ನಾಳೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ: ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್