ನವದೆಹಲಿ : ತಮಿಳುನಾಡು ಚಾಪರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರವನ್ನು ಸೂಲೂರಿನಿಂದ ಪಾಲಂ ವಾಯುನೆಲೆಗೆ ಆಗಮಿಸಿದ IAF ವಿಮಾನದಿಂದ ಹೊರತರಲಾಯಿತು.
ಸದ್ಯ, ಪಾಲಮ್ ವಾಯುನೆಲೆಯಲ್ಲಿ ಬ್ರಿಗ್ ಎಲ್ಎಸ್ ಲಿಡ್ಡರ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಎಲ್ಲಾ ಮೃತರ ಅಂತ್ಯಕ್ರಿಯೆಗಳನ್ನು ಸೂಕ್ತ ಸೇನಾ ಗೌರವಗಳೊಂದಿಗೆ ನೆರವೇರಿಸಲು ಎಲ್ಲ ರೀತಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇದೀಗ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಪಾರ್ಥಿವ ಶರೀರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂತಿಮ ನಮನ ಸಲ್ಲಿಸಿದರು.
ತಮಿಳುನಾಡು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಎಲ್/ಎನ್‌ಕೆ ವಿವೇಕ್ ಕೆಆರ್, ಎನ್‌ಕೆ ಗುರುಶೇವಕ್ ಸಿಂಗ್, ಎಲ್/ಎನ್‌ಕೆ ಬಿಎಸ್ ತೇಜ, ನಾಯಕ್ ಜಿತೇಂದರ್ ಕೆಆರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಬ್ರಿಗ್ ಎಲ್‌ಎಸ್ ಲಿಡರ್, ಹವಾಲ್ದಾರ್ ಸತ್ಪಾಲ್ ರಾಜ್, ಡಬ್ಲ್ಯುಜಿ ಸಿಡಿಆರ್ ಪಿ ಎಸ್ ಚೌಹಾಣ್, ಸ್ಕ್ಎನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ರಾಣಾ ಪ್ರತಾಪ್ ದಾಸ್ ಮತ್ತು ಜೆಡಬ್ಲ್ಯೂಒ ಪ್ರದೀಪ್ ಎ. ಪಾರ್ಥಿವ ಶರೀರವನ್ನು ಪಾಲಂ ವಾಯು ನೆಲೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಮಧುಚಂದ್ರ ಕೋಣೆಗೆ ಹೋದ ನವ ವಿವಾಹಿತೆಗೆ ಬಿಗ್ ಶಾಕ್.. ನಿದ್ದೆ ಮಾತ್ರೆ ತಿನ್ನಿಸಿ, ಗಂಡನಿಂದ ನೀಚ ಕೃತ್ಯ
ಶಾಲೆಗಳಲ್ಲಿ ಮೊಟ್ಟೆ ನೀಡುವ ವಿಚಾರದ ಕುರಿತು ಪೇಜಾವರ ಶ್ರೀಗಳು ಹೇಳಿದ್ದೇನು ಗೊತ್ತಾ..?
Prime Minister Narendra Modi pays last respects to CDS General Bipin Rawat, his wife Madhulika Rawat and other 11 Armed Forces personnel who lost their lives in the #TamilNaduChopperCrash yesterday. pic.twitter.com/QT3JHKTedq
— ANI (@ANI) December 9, 2021
Defence Minister Rajnath Singh pays last respects to CDS General Bipin Rawat, his wife Madhulika Rawat and other 11 Armed Forces personnel who lost their lives in the #TamilNaduChopperCrash yesterday. pic.twitter.com/TZI0XoAUZd
— ANI (@ANI) December 9, 2021