ಬೆಂಗಳೂರು : ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ ಇದೆ ಹಿನ್ನೆಲೆಯಲ್ಲಿ ಇದೀಗ ಸಾರ್ವಜನಿಕರಿಗೆ ಹವಾಮಾನ ಇಲಾಖೆ ಪ್ರಮುಖವಾದಂತಹ ಸೂಚನೆ ನೀಡಿದ್ದು ಮಳೆಯಿಂದ ಆಗುವ ಅವಘಡಗಳಿಂದ ಪಾರಾಗುವ ಕುರಿತು ಸೂಚನೆ ನೀಡಿದೆ.

ಮಳೆ ಅವಘಡ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಮನೆಯೊಳಗೆ ಕಿಟಕಿಗಳು ಹಾಗೂ ಬಾಗಿಲುಗಳನ್ನು ಮುಚ್ಚಬೇಕು. ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ ಸುರಕ್ಷಿತ ಆಶ್ರಯ ಪಡೆದುಕೊಳ್ಳಿ. ಮಳೆ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯವನ್ನು ಪಡೆಯಬೇಡಿ.

ಮಳೆ ಬರುವಾಗ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣ ಅನ್ ಪ್ಲಗ್ ಮಾಡಿ.ಮಳೆ ಬಂದ ತಕ್ಷಣ ಜಲಮೂಲಗಳಿಂದ ಹೊರ ಬರುವಂತೆ ಸೂಚನೆ ನೀಡಿದೆ. ವಿದ್ಯುತ್ ಶಕ್ತಿಯಿಂದ ನಡೆಸುವ ಎಲ್ಲಾ ವಸ್ತುಗಳಿಂದ ದೂರವಿರಿ. ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಲು ಹವಾಮಾನ ಇಲಾಖೆ ಸೂಚನೆ ನೀಡಿದೆ.

Share.
Exit mobile version