ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರೆಸೋನೆನ್ಸ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಕಾರ್ಖಾನೆ ಹೊತ್ತಿ ಉರಿಯುತ್ತಿದೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡ ದುರಂತ ಘಟನೆ ನಡೆದಿದೆ.

Shocking News: ‘ಮಾಟಗಾರ್ತಿಯರು’ ಎಂದು ಬಲವಂತವಾಗಿ ಮಲ ತಿನ್ನಿಸಿದ ಗ್ರಾಮಸ್ಥರು…! ಎಲ್ಲಿ ಗೊತ್ತಾ

ಸೋಮವಾರ ಬೆಳಗ್ಗೆ 9 ಗಂಟೆಗೆ ಫ್ಯಾಕ್ಟರಿಯಲ್ಲಿ ಕೆಮಿಕಲ್ಸ್ ಸ್ಫೋಟಗೊಂಡು, ಹೊತ್ತಿ ಉರಿಯುತ್ತಿದೆ. ಸ್ಫೋಟಗೊಂಡ ಹಿನ್ನೆಲೆ ದಟ್ಟವಾದ ಹೊಗೆ ಬರುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ವೇಳೆಯಲ್ಲಿ ಫ್ಯಾಕ್ಟರಿಯಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಇದ್ದು, ಎಲ್ಲಾರು ತಕ್ಷಣ ಹೊರಗಡೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Shocking News: ‘ಮಾಟಗಾರ್ತಿಯರು’ ಎಂದು ಬಲವಂತವಾಗಿ ಮಲ ತಿನ್ನಿಸಿದ ಗ್ರಾಮಸ್ಥರು…! ಎಲ್ಲಿ ಗೊತ್ತಾ

ಕಳೆದ 30 ವರ್ಷಗಳಿಂದ ರೆಸೋನೆನ್ಸ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಔಷಧಿ, ಮಾತ್ರೆಗಳಿಗೆ ಬೇಕಾದ ರಸಾಯನಿಕಗಳನ್ನ ಉತ್ಪತಿ ಮಾಡಲಾಗುತ್ತದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಬೆಂಕಿ ಅವಘಡದಿಂದ ಆದ ನಷ್ಟವನ್ನ ಅಂದಾಜು ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share.
Exit mobile version