ಉಡುಪಿ :  ರೋಸ್ ಸಮಾರಂಭದಲ್ಲಿ(ಕ್ರೈಸ್ತರ ಮದುವೆಯ ಮುನ್ನ ದಿನ ನಡೆಯುವ ಕಾರ್ಯಕ್ರಮ) ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ಕೊಳಲಗಿರಿ ಹಾವಂಜೆಯಲ್ಲಿ ನಡೆದಿದೆ.ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂಯಿಸ್ ಎಂದು ಗುರುತಿಸಲಾಗಿದೆ.

BIGG NEWS : ‘ನಾನು ಆರೋಗ್ಯವಾಗಿದ್ದೇನೆ , ಶೂಟಿಂಗ್‌ನಲ್ಲಿ ಭಾಗಿಯಾಗ್ತಿದ್ದೇನೆ ‘ ವಿಡಿಯೋ ‘ರಿಲೀಸ್‌ ಮಾಡಿದ ನಟ ಉಪೇಂದ್ರ’ | Watch video

ಇವರು ನಿನ್ನೆ ರಾತ್ರಿ ಕೊಳಲಗಿರಿ ಹಾವಂಜೆಯ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಸಮಾರಂಭಕ್ಕೆ ತೆರಳಿದ್ದರು.

BIGG NEWS : ‘ನಾನು ಆರೋಗ್ಯವಾಗಿದ್ದೇನೆ , ಶೂಟಿಂಗ್‌ನಲ್ಲಿ ಭಾಗಿಯಾಗ್ತಿದ್ದೇನೆ ‘ ವಿಡಿಯೋ ‘ರಿಲೀಸ್‌ ಮಾಡಿದ ನಟ ಉಪೇಂದ್ರ’ | Watch video

ಅಲ್ಲಿ 8.30ರ ಸುಮಾರಿಗೆ ಏಕಾಏಕಿಯಾಗಿ ರಕ್ತದ ಒತ್ತಡ ಕಡಿಮೆಯಾದ ಪರಿಣಾಮ ಜೋಸ್ನಾ ಅವರು ಅಲ್ಲೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಜೋಸ್ನಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Share.
Exit mobile version