ತುಮಕೂರು: ಜಿಲ್ಲೆಯ ಮಧುಗಿರಿ ಕ್ಷೇತ್ರದ ಕೂಡಿಗೆಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸಂಪಿಗೆ ಬಿದ್ದ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ, ಪೋಷಕರ ಕೈಯಲ್ಲಿಯೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಇಂತಹ ಘಟನೆಯನ್ನು ಕಂಡು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ.

ಈ ಕುರಿತಂತೆ ಅವರು ಮಾಹಿತಿ ನೀಡಿದ್ದು, ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಘೋರ ದುರಂತ ನಡೆದಿದೆ. ಸಂಪ್ ನಲ್ಲಿ ಮಗು ಬಿದ್ದಿತ್ತು ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಆಂಬುಲೆನ್ಸ್ ಇದೆ, ಚಾಲಕ ಇಲ್ಲ. ನೀರಿಗೆ ಬಿದ್ದ ಮಗುವಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೇ ಪೋಷಕರ ಕಣ್ಣೆದುರೇ, ಕೈಯ್ಯಲ್ಲಿ ಸಾವನ್ನಪ್ಪಿದ ಮಗು ಸಾವನ್ನಪ್ಪಿತು. ಇದನ್ನು ಕಂಡ ತಂದೆ-ತಾಯಿ ಕುಸಿದು ಬಿದ್ದೆ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು ಎಂದಿದ್ದಾರೆ.

ಶಿವಮೊಗ್ಗ: ಡಿ.4ರಂದು ‘ನಗರ ಪ್ರದೇಶ’ದ ಅರ್ಧ ಭಾಗದಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಇನ್ನೂ ಜೀವ ಬಿಟ್ಟ ಮಗುವನ್ನು ಎತ್ತಿಕೊಂಡು ಓಡಿಬಂದ ಆ ಪೋಷಕರಿಗೆ ತಾವು ಎದುರಾದೆವು. ಕೊಡಿಗೆನಹಳ್ಳಿಯಲ್ಲಿ ಸಾಗುತ್ತಿದ್ದ ಪಂಚರತ್ನ ಯಾತ್ರೆ ವೇಳೆ ಎದುರಾದಾಗ, ಪೋಷಕರ ಕೈಯ್ಯಲ್ಲಿ ಮಗುವಿನ ಪಾರ್ಥೀವ ಶರೀರ ಕಂಡು ಆಘಾತಕ್ಕೊಳಗಾದೆನು.  ತಕ್ಷಣವೇ ಮಾಗುವನ್ನು ಪಂಚರತ್ನ ವಾಹನದ ಮೇಲೆಕ್ಕೆ ಎತ್ತಿಕೊಂಡು, ಮಗುವನ್ನು ಕಂಡು ಕಣ್ಣೀರಿಟ್ಟಿದ್ದಾರೆ.

ಈ ವೇಳೆ ಕೊಡಿಗೇಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಪೋಷಕರ ಬಳಿ ಮಾಹಿತಿ ಪಡೆದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮಗು ಸಾವುನ್ನಪ್ಪಿದೆ. ಸರಕಾರ ಹಾಗೂ ಆರೋಗ್ಯ ಸಚಿವರ ವಿರುದ್ಧ ಕಿಡಿ ಕಾರಿದರು.

ಕೆಜಿಎಫ್ ಚಿತ್ರದ ಹಾಡು ತೆರವುಗೊಳಿಸಿದ ವಿಚಾರ: ಹೈಕೋರ್ಟ್ ನಿಂದ ರಾಹುಲ್ ಗಾಂಧಿ ಸೇರಿ ಹಲವು ಕೈ ನಾಯಕರಿಗೆ ನೋಟಿಸ್

ಇನ್ನೂ ಸ್ಥಳದಿಂದಲೇ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ತುಮಕೂರು DHO ಅವರಿಗೆ ಕರೆ ಮಾಡಿದ ಅವರು, DHO ಗೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ಡಿ ಹೆಚ್ ಓ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೂಡಲೇ ಕೊಡಿಗೇನಹಳ್ಳಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿದಂತ ಅವರು, ಕರ್ತವ್ಯಲೋಪ ಎಸಗಿದ ಸಿಬ್ಬಂದಿ ಅಮಾನತು ಮಾಡಲು ಸೂಚನೆ ನೀಡಿದ್ದಾರೆ. ಜೊತೆಗೆ ಪೊಲೀಸ್ ಪ್ರಕರಣ ದಾಖಲು ಮಾಡುವಂತೆ ಪೊಲೀಸರಿಗೆ ಸೂಚಿದರು. ಆಕ್ರೋಶಗೊಂಡ ಸ್ಥಳೀಯ ಜನರನ್ನು ಸಮಾಧಾನಪಡಿಸಿದರು. ಅಲ್ಲದೇ ಮೃತ ಬಾಲಕನಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಸ್ಥಳೀಯ ಶಾಸಕ ವೀರಭದ್ರಯ್ಯ ಘೋಷಿಸಿದರು. ಸರ್ಕಾರದಿಂದಲೂ ಪರಿಹಾರವನ್ನು ಕೊಡಿಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದರು.

BREAKING: ಇಡಿಯಿಂದ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಉಪಕಾರ್ಯದರ್ಶಿ ಬಂಧನ

ಅಂದಹಾಗೇ ಕೋಡಿಗೇಹಳ್ಳಿ ಗ್ರಾಮದ ತಾಯಿ ಮಲ್ಲಿಕಾ, ಶೌಖತ್ ದಂಪತಿಗಳ ಪುತ್ರ ನಾಲ್ಕು ವರ್ಷ ಮಗು ಅಬ್ಬಾಸ್ ಸಂಪ್ ನಲ್ಲಿ ಮುಳುಗಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದಂತ ಬಾಲಕನಾಗಿದ್ದಾನೆ.

Share.
Exit mobile version