ಕೆಎನ್‌ ಎನ್‌ ಡೆಸ್ಕ್‌ ನ್ಯೂಸ್:‌ ಇಂದಿನ ದಿನದಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ.  ಆರೋಗ್ಯವಾಗಿದ್ದವರು ಕೂಡಾ ಹೃದಯಾಘಾತದಿಂದ ನಿಧನರಾಗುತ್ತಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳು ಹಿರಿಯರು ಮಾತ್ರವಲ್ಲ, ಈಗ ಮಕ್ಕಳನ್ನೂ ಕಾಡುತ್ತಿದೆ.

BIGG NEWS: ಚುನಾವಣೆ ಹೊತ್ತಿಗೆ ಬಿಜೆಪಿ, ಜೆಡಿಎಸ್‍ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಎಂ.ಲಕ್ಷ್ಮಣ್ ಸ್ಫೋಟಕ ಮಾಹಿತಿ

 

ಇದು ಬಹಳ ಗಂಭೀರ ಸಮಸ್ಯೆಯಾಗಿದೆ. ವಯಸ್ಕರು ಮತ್ತು ಮಕ್ಕಳಲ್ಲಿ ಇದರ ಅಪಾಯವು ಹೆಚ್ಚಾಗಿರುತ್ತದೆ. ದೇಹದಲ್ಲಿ ರಕ್ತದ ಪೂರೈಕೆಗೆ ಅಡಚಣೆ ಉಂಟಾದಾಗ, ಹೃದಯದ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಇದರಿಂದ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಸರಿಯಾದ ಆಹಾರವನ್ನು ತಿನ್ನದೆ, ಜಂಕ್‌ ಫುಡ್‌ಗಳನ್ನೇ ಹೆಚ್ಚು ತಿನ್ನುತ್ತಾ ಮೊಬೈಲ್‌, ಲ್ಯಾಪ್‌ಟಾಪ್‌ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಮಕ್ಕಳಲ್ಲಿ, ಚಯಾಪಚಯ ದರವು ಕ್ಷೀಣಿಸುತ್ತದೆ. ಈ ಹೈಪೊಗ್ಲಿಸಿಮಿಯಾವು ಹೃದಯದ ಸಮಸ್ಯೆಗಳನ್ನು ಹೆಚ್ಚಿಸಲು ಕಾರಣವಾಗಬಹುದು. ಕೊರೊನಾ ಸಮಯದಲ್ಲಿ ಪ್ರಪಂಚದಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು. ಹೆದರಿಕೆಯಿಂದ ಪೋಷಕರು ಕೂಡಾ ಮಕ್ಕಳನ್ನು ಹೊರಗೆ ಕಳಿಸಲು ಹೆದರುತ್ತಿದ್ದರು.

BIGG NEWS: ಚುನಾವಣೆ ಹೊತ್ತಿಗೆ ಬಿಜೆಪಿ, ಜೆಡಿಎಸ್‍ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಎಂ.ಲಕ್ಷ್ಮಣ್ ಸ್ಫೋಟಕ ಮಾಹಿತಿ

 

ಇದರ ಪರಿಣಾಮ ಮಕ್ಕಳು ಆಟವಾಡುವುದನ್ನು ನಿಲ್ಲಿಸಿದರು. ಮನೆಯಲ್ಲಿ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಮುಂದೆ ಕುಳಿತು ತಿಂಡಿ ತಿನ್ನುತ್ತಾ ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಇಂತಹ ಕಾರಣಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇಂದಿನ ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ. ಇದರ ಮೂಲಕ ದೇಹ ಹಾಗೂ ಮನಸ್ಸು ಎರಡೂ ದುರ್ಬಲವಾಗುತ್ತಿದೆ.

ಮಕ್ಕಳಲ್ಲಿ ಉಂಟಾಗುವ ಒತ್ತಡದ ಕಾರಣದಿಂದ ಕೂಡಾ ಅವರಿಗೆ ಹೃದಯದ ಸಮಸ್ಯೆ ಬರುತ್ತವೆ. ರಾತ್ರಿ ತಡವಾಗಿ ಮಲಗುವುದು, ಮೊಬೈಲ್ ಬಳಸುವುದು, ಅದರಲ್ಲಿ ಗೇಮ್ ಆಡುವುದು, ಬೆಳಗ್ಗೆ ಬೇಗ ಏಳುವುದು ಇವೆಲ್ಲವೂ ಕಾಯಿಲೆಗಳಿಗೆ ಕಾರಣ. ಇದರೊಂದಿಗೆ ಸ್ಥೂಲಕಾಯದ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಈ ಅಭ್ಯಾಸಗಳ ಬಗ್ಗೆ ಗಮನಹರಿಸಬೇಕು. ಅವರೊಂದಿಗೆ ಸಮಯ ಕಳೆಯಬೇಕು. ಮೊಬೈಲ್‌, ಕಂಪ್ಯೂಟರ್‌ನಿಂದ ದೂರ ಇರುವಂತೆ ನೋಡಿಕೊಳ್ಳಿ. ಅದರ ಬದಲಿಗೆ ಗ್ರೌಂಡ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಕಳಿಸಿ.

Share.
Exit mobile version