ಬೆಂಗಳೂರು : ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ  ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಆಕ್ರೋಶ  ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಸಚಿವರು  ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಮ್ಮ ಕೀಳು ಮಟ್ಟದ ರಾಜಕಾರಣ ರಾಜ್ಯದ ಜನತೆಗೆ ಹೊಸತೇನಲ್ಲ. 2015ರಲ್ಲಿ ರಾಜ್ಯದಲ್ಲಿ 5,109 ನವಜಾತ ಶಿಶುಗಳು, 519 ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ. ಆಗ ನೀವು ನಿಮ್ಮ ಆರೋಗ್ಯ ಸಚಿವರ ರಾಜೇನಾಮೆ ಪಡೆದುಕೊಂಡಿರಾ? ಎಂದು ಕಿಡಿಕಾರಿದ್ದಾರೆ.

ತಾವು ಮುಖ್ಯಮಂತ್ರಿಗಳಾಗಿದ್ದಾಗ ತಮ್ಮ ತವರು ಜಿಲ್ಲೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ತಿಂಗಳಿನಲ್ಲಿ 6 ಬಾಣಂತಿ ಮಹಿಳೆಯರು ಜೀವ ಕಳೆದುಕೊಂಡಾಗ ಅಥವಾ ಕೋಲಾರದಲ್ಲಿ 90 ಹಸುಗೂಸುಗಳ ಮರಣದ ಪ್ರಕರಣ ಬೆಳಕಿಗೆ ಬಂದಾಗ ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೇನು? ಎಂದು ಕಿಡಿಕಾರಿದ್ದಾರೆ.

2017ರಲ್ಲಿ ತಮ್ಮ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಒಣ ಪ್ರತಿಷ್ಠೆಗೋಸ್ಕರ ವೈದ್ಯರನ್ನು 2ವಾರ ಮುಷ್ಕರಕ್ಕೆ ದೂಡಿ ರಾಜ್ಯಾದ್ಯಂತ ಆಸ್ಪತ್ರೆಗಳು,ಕ್ಲಿನಿಕ್ ಗಳು ಮುಚ್ಚಿ 65ಕ್ಕೂ ಹೆಚ್ಚು ಜನ ಚಿಕಿತ್ಸೆ ಸಿಗದೆ ಸತ್ತಾಗ ಆತ್ಮಸಾಕ್ಷಿ ಇಲ್ಲದೆ ಅವರ ಸಾವಿಗೆ ಸಾಕ್ಷಿ ಕೇಳಿದ ತಾವು ಯಾವ ನೈತಿಕತೆ ಇಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದೀರಿ ಎಂದಿದ್ದಾರೆ.

ಕುಮಾರಸ್ವಾಮಿ ಸರ್ಕಾರ ಇದ್ದಾಗ ಸುಲುವಾಡಿ ಗ್ರಾಮದಲ್ಲಿ ವಿಷಪೂರಿತ ಪ್ರಸಾದ ಸ್ವೀಕರಿಸಿ 15 ಮಂದಿ ಮೃತಪಟ್ಟಾಗ ಅವರ ಆರೋಗ್ಯ ಸಚಿವರಿಗೆ 2 ದಿನವಾದರೂ ಅದರ ಮಾಹಿತಿಯೇ ಇರಲಿಲ್ಲ. ಮೇ 2019ರಲ್ಲಿ ಕೆಜಿಎಫ್ ನಲ್ಲಿ ಸಮೀನಾ ಎಂಬ ಗರ್ಭಿಣಿ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗುವನ್ನು ಕಳೆದುಕೊಂಡಾಗ ರಾಜೀನಾಮೆ ಕೊಟ್ಟರೆ? ಎಂದು ವಾಗ್ಧಾಳಿ ನಡೆಸಿದ್ದಾರೆ.

 

 

 

BIGG NEWS : ನೂತನ ಜಿಲ್ಲೆ ವಿಜಯನಗರದ ಜಿಲ್ಲಾಧಿಕಾರಿ, ‘SP’ ಬದಲಾವಣೆ : ರಾಜ್ಯ ಸರ್ಕಾರದಿಂದ ಆದೇಶ

Share.
Exit mobile version