ಮಳ್ಳನಂತೆ ಮನೆಗೆ ಬಂದು ಬೆಳ್ಳಿ ನಾಣ್ಯ ಕೊಟ್ಟು, ಚಿನ್ನದ ಸರದೊಂದಿಗೆ ಎಸ್ಕೇಪ್..! – Kannada News Now


State

ಮಳ್ಳನಂತೆ ಮನೆಗೆ ಬಂದು ಬೆಳ್ಳಿ ನಾಣ್ಯ ಕೊಟ್ಟು, ಚಿನ್ನದ ಸರದೊಂದಿಗೆ ಎಸ್ಕೇಪ್..!

ಬೆಂಗಳೂರು: ಗೃಹ ಪ್ರವೇಶಕ್ಕೆ ಬರುವಂತೆ ಆಹ್ವಾನದ ಜೊತೆಗೆ ಬೆಳ್ಳಿ ನಾಣ್ಯ ಕೊಟ್ಟು ಬಂಗಾರದ ಸರದೊಂದಿಗೆ ಎಸ್ಕೇಪ್‌ ಆಗಿ ವೃದ್ಧ ದಂಪತಿಗಳನ್ನ ನಡೆದ ಘಟನೆ ನಗರದ ರಾಜಾಜಿನಗರದಲ್ಲಿ ನಡೆದಿದೆ.

ಅಕ್ಷಯ್ ಎನ್ನುವ ಆರೋಪಿ ನಗರದ ರಾಜಾಜಿನಗರದ ಸೀತಾಪತಿ ದಂಪತಿಯ ಮನೆಗೆ ತೆರಳಿ​, ನಾನು ನಿಮ್ಮ ಎದುಗಡೆ ಮನೆ ನಿವಾಸಿ. ನಮ್ಮ ಮನೆ ಗೃಹ ಪ್ರವೇಶವಿದೆ. ನೀವೂ ಬನ್ನಿ ಅಂತ ದಂಪತಿ ಕೈಗೆ ಒಂದು ಬೆಳ್ಳಿ ಡಾಲರ್ ಮಾದರಿಯ ನಾಣ್ಯ ಕೊಟ್ಟಿದ್ದಾನೆ. ಬಳಿಕ ನೀವು ಗೃಹ ಪ್ರವೇಶಕ್ಕೆ ಬಂದಾಗ, ನಿಮ್ಮ ಚಿನ್ನದ ಸರಕ್ಕೆ ಚಿನ್ನದ ಡಾಲರ್ ಕೊಡುತ್ತೇವೆ ಎಂದು ಸೀತಾಪತಿಯ ಹೆಂಡತಿಯ ಬಳಿಯಿದ್ದ 24 ಗ್ರಾಂ ಚಿನ್ನಾಭರಣ ಪಡೆದಿದ್ದ. ನಂತ್ರ ಆಗಾಗ ಮನೆಗೆ ಬರುತ್ತಿದ್ದ ಆರೋಪಿ ಸರಿಯಾದ ಸಮಯ ನೋಡಿ ಚಿನ್ನದ ಸರವನ್ನ ಕದ್ದು ಎಸ್ಕೇಪ್‌ ಆಗಿದ್ದಾನೆ.

ಇದನ್ನ ತಿಳಿಯದ ವೃದ್ಧ ದಂಪತಿ, ಗ್ಯಾಸ್ ಸಿಲಿಂಡರ್ ವ್ಯಕ್ತಿ ಬಂದಾಗ, ಆತನಿಗೆ ಹಣ ಕೊಡಲು ಬೀರುವಿನ ಕೀಗಾಗಿ ವೃದ್ದ ಹುಡುಕಾಟ ನಡೆಸಿದ್ದರು. ಕೀ ಸಿಗದ ಕಾರಣ, ಗ್ಯಾಸ್ ಸಿಲಿಂಡರ್ ವ್ಯಕ್ತಿಗೆ ನಾಳೆ ಬಾ ಎಂದು ವೃದ್ಧ ಸೀತಾಪತಿ ಹೇಳಿ ಕಳುಹಿಸಿದ್ದರು. ಆದ್ರೆ, ಅಷ್ಟರಲ್ಲಾಗಲೇ ವೃದ್ಧ ಸೀತಾಪತಿಯ ಪತ್ನಿಯ ಚಿನ್ನದ ಸರ ಕದ್ದು ಅಕ್ಷಯ್ ಎಸ್ಕೇಪ್ ಆಗಿದ್ದಾನೆ. ಬಳಿಕ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಅಕ್ಷಯ್ ನನ್ನ ಪತ್ತೆಹಚ್ಚಿದ ಪೊಲೀಸರು ಆತನಿಂದ 24 ಗ್ರಾಂ ಚಿನ್ನದ ಸರ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
error: Content is protected !!