ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಬೆನ್ನಲ್ಲೇ, ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರ ಪುತ್ರ ಕಿಡ್ನ್ಯಾಪ್ ಆರೋಪದಲ್ಲಿ ದೂರು ನೀಡಿದ್ದರು. ಇದೀಗ ಕಿಡ್ನ್ಯಾಪ್ ಆಗಿರೋ ಸಂತ್ರಸ್ತೆ ಮಡಿಕೇರಿಯ ತೋಟದ ಮನೆಯೊಂದರಲ್ಲಿ ಅಡಗಿಸಿಟ್ಟಿರೋ ಶಂಕೆ ವ್ಯಕ್ತವಾಗಿದೆ.

ಹೌದು, ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗಿರುವಂತ ಸಂತ್ರಸ್ತೆ ಮಡಿಕೇರಿಯಲ್ಲಿರುವ ಅನುಮಾನ ಈಗ ವ್ಯಕ್ತವಾಗಿದೆ. ಮಡಿಕೇರಿಯ ತೋಟದ ಮನೆಯೊಂದರಲ್ಲಿ ಅಡಗಿಸಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ಮಹಿಳೆಯನ್ನು ಜೆಡಿಎಸ್ ನಾಯಕರೊಬ್ಬರ ಮಡಿಕೇರಿಯ ತೋಟದ ಮನೆಯಲ್ಲಿ ಅಡಗಿಸಿ ಇಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯ ಫಾರ್ಮ್‍ಹೌಸ್ ನ ಮಾಹಿತಿ ಮೇರೆಗೆ ಮಡಿಕೇರಿಯಲ್ಲಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.

ಮತ್ತೊಂದೆಡೆ ರೇವಣ್ಣ ವಿರುದ್ಧ ದಾಖಲಾಗಿದ್ದಂತ ಕಿಡ್ನ್ಯಾಪ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಎಸ್ಐಟಿ ಪರ ಎಸ್ ಪಿಪಿಯ ವಾದ, ಹೆಚ್ ಡಿ ರೇವಣ್ಣ ಪರ ವಕೀಲರ ಪ್ರತಿವಾದವನ್ನು ಆಲಿಸಿದ ಬಳಿಕ, ವಿಚಾರಣೆಯನ್ನು ಮುಂದೂಡಲಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸೋ ಸಾಧ್ಯತೆ ಇದೆ.

ಜಾಮೀನು ಅರ್ಜಿ ವಿಚಾರಣೆ ನಡುವೆಯೇ ಕೆ.ಆರ್.ನಗರ ಮಹಿಳೆಯ ಹುಡುಕಾಟ ಚುರುಕಾಗಿದೆ. ಮಹಿಳೆಯನ್ನು ಅಪಹರಿಸಿ ಎಲ್ಲಿ ಇಟ್ಟಿರಬಹುದು ಎಂಬ ವಿಚಾರದಲ್ಲಿ ತನಿಖೆ ಚುರುಕುಗೊಂಡಿದೆ.

Prajwal Revanna Case: ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

Prajwal Revanna Case: ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

Share.
Exit mobile version