ಬೆಂಗಳೂರು: ಅಪಾರ್ಮೆಂಟ್ ನಿವಾಸಿಗಳಾಗಿ, ಮತದಾರರಾಗಿರುವಂತವರಿಗೆ ಆಮಿಷ ವೊಡ್ಡಿದಂತ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ಹೌದು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಆಮಿಷ ಪ್ರಕರಣದಲ್ಲಿ ಡಿಕೆ ಶಿಗೆ ರಿಲೀಫ್ ನೀಡಲಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ.

ಚುನಾವಣೆ ಭಾಷಣವನ್ನು ಆಮಿಷವೆಂದು ಆರೋಪಿಸಲಾಗಿದೆ ಎಂಬುದಾಗಿ ಡಿಕೆ ಶಿವಕುಮಾರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದಿಸಿದ್ದರು. ಡಿಕೆಶಿ ಪರ ವಾದಕ್ಕೆ ಚುನಾವಣಾ ಆಯೋಗದ ವಕೀಲರ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.

ಮತದಾರರಿಗೆ ಡಿ. ಕೆ ಶಿವಕುಮಾರ್ ಆಮಿಷ ಒಡ್ಡಿದ್ದಾರೆ. ನಾನು ಇಲ್ಲಿ ಬಿಸಿನೆಸ್ ಡೀಲ್ ಗೆ ಬಂದಿದ್ದೇನೆ. ‘ನಿಮಗೆ ಹೆಚ್ಚು ಕಾವೇರಿ ನೀರು ಬೇಕೆಂದು ಕೇಳಿದ್ದೀರಿ. ನಿಮಗೆ ಅಪಾರ್ಟ್ ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ. ‘ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುತ್ತೇನೆ. ಡಿಕೆ ಶಿ ಹೇಳಿಕೆ ಉಲ್ಲೇಖಿಸಿ ವಕೀಲ ಶರತ್ ದೊಡ್ಡವಾಡ್ ವಾದಿಸಿದರು.

ಈ ವೇಳೆ ಚುನಾವಣೆ ಪ್ರಚಾರದ ಗುಣಮಟ್ಟ ಕುಸಿತಕ್ಕೆ ಹೈಕೋರ್ಟ್ ಕಳವಳ ವ್ಯಕ್ತ ಪಡಿಸಿತು. ಭಾಷಣದ ವೇಳೆ ಇದು ಪುನರಾವರ್ತನೆಯಾಗದಂತೆ ಎಚ್ಚರಿಸಿ, ಡಿಕೆಶಿ ಪರ ಹಿರಿಯ ವಕೀಲ ಉದಯ್ ಹೊಳ್ಳ ರಿಗೆ ಕೋರ್ಟ್ ಸೂಚನೆ ನೀಡಿತು. ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆಯನ್ನು ಹೈಕೋರ್ಟ್ ನ್ಯಾ.ಕೃಷ್ಣ ಎಸ್ ದೀಕ್ಷಿತ್ ರಿದ್ದ ಹೈಕೋರ್ಟ್ ಪೀಠ ನೀಡಿತು.

BREAKING: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಯುವಕರು ದುರ್ಮರಣ

ಮತದಾರರೇ ಎಚ್ಚರ ; ಮತಗಟ್ಟೆಗಳಲ್ಲಿ ‘ಮೊಬೈಲ್ ಫೋನ್’ ಬಳಸುವಂತಿಲ್ಲ

Share.
Exit mobile version