ಬೆಂಗಳೂರು: ನಗರದ ಟರ್ಫ್ ಕ್ಲಪ್ ನಲ್ಲಿ ರೇಸಿಂಗ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇಂದು ಹೈಕೋರ್ಟ್ ಮತ್ತೆ ಟರ್ಫ್ ಕ್ಲಪ್ ನಲ್ಲಿ ರೇಸಿಂಗ್ ಚಟುವಟಿಕೆಗಳನ್ನು ನಡೆಸೋದಕ್ಕೆ ಅನುಮತಿ ನೀಡಿದೆ.

ಬೆಂಗಳೂರಿನ ಟರ್ಫ್ ಕ್ಲಪ್ ನಲ್ಲಿ ರೇಸಿಂಗ್, ಬೆಟ್ಟಿ ಚಟುವಟಿಕೆ ಮುಂದುವರೆಸಲು ಹೈಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ಏಕಸದಸ್ಯಪೀಠವು ಮಧ್ಯಂತರ ಅನುತಿ ನೀಡಿ ಆದೇಶಿಸಿದೆ.

ರಾಜ್ಯ ಸರ್ಕಾರವು 2024-25ನೇ ಸಾಲಿನಲ್ಲಿ ಬೆಟ್ಟಿಂಗ್ ಚಟುವಟಿಕೆಯ ಹಿನ್ನಲೆಯಲ್ಲಿ ಅನುಮತಿ ನೀಡಲು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಟರ್ಫ್ ಕ್ಲಪ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಎಸ್. ಆರ್ ಕೃಷ್ಣಮೂರ್ತಿಯನ್ನು ಒಳಗೊಂಡಂತ ಏಕಸದಸ್ಯ ನ್ಯಾಯಪೀಠವು, ರೇಸಿಂಗ್, ಬೆಟ್ಟಿಂಗ್ ಮೇಲೆ ನಿಗಾ ವಹಿಸಲು ಸರ್ಕಾರಕ್ಕೆ ಸ್ವತಂತ್ರ್ಯವಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿತು. ಅಲ್ಲದೇ ರೇಸಿಂಗ್, ಬೆಟ್ಟಿಂಗ್ ಚಟುವಟಿಕೆ ಮುಂದುವರೆಸಲು ಅನುಮತಿ ನೀಡಿ ಆದೇಶಿಸಿದೆ.

ಜನಸಾಮಾನ್ಯರಿಗೆ ʻದುಬಾರಿ ದುನಿಯಾʼ : ದವಸ, ಧಾನ್ಯಗಳು ಸೇರಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ |

ಮೋದಿ ಪ್ರಧಾನಿಯಾದ ಬೆನ್ನಲ್ಲೇ ಷೇರು ಮಾರುಕಟ್ಟೆ ಸಂಚಲನ : 5 ಟ್ರಿಲಿಯನ್ ಡಾಲರ್ ದಾಟಿದ ಮಾರುಕಟ್ಟೆ ಕ್ಯಾಪ್ | PM Modi

Share.
Exit mobile version