ಹಾವೇರಿ : ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಿತು. ಆದರೆ ಹಾವೇರಿಯಲ್ಲಿ ಒಂದು ಘಟನೆ ನಡೆದಿದ್ದು, ಮನೆಯಲ್ಲಿ ಪತಿ ತೀರಿಹೋಗಿದ್ದರೂ ಕೂಡ ಪತ್ನಿ ಮತದಾನದ ಮಹತ್ವವನ್ನು ಅರಿತುಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿ ಮತ ಹಾಕದೆ ಇರುವವರಿಗೆ ಮತ ಹಾಕಿ ಎಂದು ಮಹತ್ವ ಸಂದೇಶ ಸಾರಿರುವ ಘಟನೆ ನಡೆದಿದೆ.

ಹೌದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಗಂಡ ತೀರಿಹೋದರೂ ಹೆಂಡತಿ ಮತದಾನ ಮರೆತ್ತಿಲ್ಲ. ಪತಿ ನಾಗಪ್ಪ ಮೃತಪಟ್ಟಿದ್ದರು ಪತ್ನಿ ಚಿನ್ನವ್ವ, ಮಗ ಮಾಲತೇಶ, ಮಗಳು ಜ್ಯೋತಿ ದುಖಃದ ಮಡುವಿನಲ್ಲಿ ಇದ್ದರೂ ಸಹಿತ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಆ ಮೂಲಕ ಎಲ್ಲರೂ ಮತ ಚಲಾಯಿಸುವಂತೆ ಸಂದೇಶ ಸಾರಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಾಗಪ್ಪ ಕಳಂಗಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.ನಿನ್ನೆ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನೆರವೇರಿಸಬೇಕಿತ್ತು. ಆದರೆ ದುಃಖದ ಮಡುವಿನಲ್ಲಿದ್ದ ಕುಟುಂಬ ಅದಕ್ಕೂ ಮುಂಚೆ ಮತಗಟ್ಟೆಗೆ ಬಂದು ಮತದಾನ ಮಾಡಿ, ಜನರಿಗೆ ಮತದಾನದ ಮಹತ್ವ ಕುರಿತು ಒಳ್ಳೆಯ ಸಂದೇಶ ಸಾರಿದ್ದಾರೆ.

Share.
Exit mobile version