ನವದೆಹಲಿ : ಕೇಂದ್ರದ ಮೋದಿ ಸರ್ಕಾರ ಮಹತ್ವಾಕಾಂಕ್ಷೆಯಿಂದ ಜಾರಿಗೆ ತರುತ್ತಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಭಾಗವಾಗಿ ರೈತರಿಗೆ ವಾರ್ಷಿಕ 6,000 ರೂಪಾಯಿ ಸಹಾಯಧನ ನೀಡುತ್ತಿರುವುದು ಗೊತ್ತೇ ಇದೆ. ರೈತರಿಗೆ ವರ್ಷಕ್ಕೆ ಮೂರು ಬಾರಿ 2 ಸಾವಿರಗಳಂತೆ, 6 ಸಾವಿರ ನೆರವು ನೀಡಲಾಗ್ತಿದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಈ ಆರ್ಥಿಕ ನೆರವನ್ನ ಹೆಚ್ಚಿಸಲಿದೆ ಎಂಬ ವರದಿಗಳು ಬರುತ್ತಿವೆ. ಆದ್ರೆ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪಿಎಂ-ಕಿಸಾನ್ ಮೊತ್ತವನ್ನ ಹೆಚ್ಚಿಸುವ ಉದ್ದೇಶ ಸದ್ಯಕ್ಕಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಈ ಮಟ್ಟಿಗೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ಅವರು, ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಇದುವರೆಗೆ 12 ಕಂತುಗಳ ಹಣವನ್ನ ಜಮಾ ಮಾಡಿದೆ. ಪಿಎಂ ಕಿಸಾನ್ ಯೋಜನೆಯಡಿ ಸುಮಾರು 11 ಕೋಟಿ ರೈತರಿಗೆ ಸರ್ಕಾರ 2.2 ಲಕ್ಷ ಕೋಟಿ ರೂಪಾಯಿಗಳನ್ನ ವರ್ಗಾಯಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಹೇಳಿದ್ದಾರೆ.
ಅಂದ್ಹಾಗೆ, ಇವರೆಗೂ 12 ಕಂತು ಬಂದಿದ್ದು,ಈಗ 13ನೇ ಕಂತು ಬರಬೇಕಿದೆ. ಹೋಳಿಗೂ ಮುನ್ನ ರೈತರ ಖಾತೆಗೆ ಹಣ ಸೇರಬೋದು ಎನ್ನಲಾಗ್ತಿದೆ. ಆದ್ರೆ, ಇ-ಕೆವೈಸಿ ಮಾಡದವರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
‘ಲಂಬಾಣಿ’ ಮಹಿಳೆಯರ ಜೊತೆ ನೃತ್ಯ ಮಾಡಿ ಗಮನ ಸೆಳೆದ ‘ಸಿದ್ದರಾಮಯ್ಯ’ |VIDEO
Liver Health : ‘ಲಿವರ್’ ಆರೋಗ್ಯಕ್ಕಾಗಿ ಆಹಾರದಲ್ಲಿ ಈ 6 ಪದಾರ್ಥಗಳನ್ನು ಸೇರಿಸಿ