ಬೆಂಗಳೂರು: ಆಗ್ನೇಯ ಏಷ್ಯಾದ ಪ್ರಮುಖ ಏರೋನಾಟಿಕಲ್ ಸಂಸ್ಥೆ ( Aeronautical Industry of South East Asia ), ಕೇಂದ್ರ ಸಾರ್ವಜನಿಕ ವಲಯದ ( Central Public Sector Undertaking ) ಉದ್ಯಮವಾದಂತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited – HAL)ನಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗಾಗಿ ( HAL Recruitment ) ಅರ್ಜಿಯನ್ನು ಆಹ್ವಾನಿಸಲಾಗಿದೆ.
Shivaram Health Update: ‘ಹಿರಿಯ ನಟ ಶಿವರಾಂ’ ಆರೋಗ್ಯ ಸ್ಥಿತಿ ಕುರಿತಂತೆ ವೈದ್ಯರು ಹೇಳಿದ್ದೇನು ಗೊತ್ತಾ.?
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ಹೆಚ್ ಎ ಎಲ್, ಎಚ್ಎಎಲ್, ವೈದ್ಯಕೀಯ ಮತ್ತು ಆರೋಗ್ಯ ಘಟಕ (ಬೆಂಗಳೂರು ಸಂಕೀರ್ಣ)ದಲ್ಲಿ ಖಾಲಿ ಇರುವಂತ ನಾನ್-ಎಕ್ಸಿಕ್ಯುಟೀವ್ ಕೇಡರ್ ನಲ್ಲಿ ನಾಲ್ಕು ವರ್ಷದವರೆಗೆ ಗುತ್ತಿಗೆ ಆಧಾರ ಮೇಲೆ ನರ್ಸಿಂಗ್ ಕೇಡರ್ ನಲ್ಲಿ ಖಾಲಿ ಇರುವಂತ ಪ್ಯಾರಾ-ಮೆಡಿಕಲ್ ವರ್ಗದ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಸಿಸ್ಟ್ ಮತ್ತು ಡ್ರೆಸ್ಸರ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು – 11
ಹುದ್ದೆಗಳ ವಿವರ
- ಸ್ಟಾಫ್ ನರ್ಸ್ – 07
- ಫಿಸಿಯೋಥೆರಫಿಸ್ಟ್ – 01
- ಫಾರ್ಮಸಿಸ್ಟ್ – 01
- ಡ್ರೆಸ್ಸೆರ್ -02
ವೇತನ ಶ್ರೇಣಿ – ಸ್ಕೇಲ್ 5ರ ವರ್ಗದ ಹುದ್ದೆಗಳಿಗೆ ರೂ.37,383. ಸ್ಕೇಲನ್ 04 ಹುದ್ದೆಗಳಿಗೆ ರೂ.35,555 ಆಗಿದೆ.
ಅರ್ಜಿ ಸಲ್ಲಿಕೆ ಹೇಗೆ.?
ಅರ್ಹ ಅಭ್ಯರ್ಥಿಗಳು www.hal-india.co.in ಜಾಲತಾಣಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕ ದಿನಾಂಕ 14-12-2021ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಕೂಡ ಈ ಲಿಂಕ್ ವಿಳಾಸಕ್ಕೆ ಭೇಟಿ ನೀಡಿ ಪಡೆಯಬಹುದು.
ಆಯ್ಕೆ ವಿಧಾನ – ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದಂತ ಅಂಕಗಳ ಆಧಾರದ ಮೇಲೆ ಮೆರಿಟ್ ಲೀಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
BIG BREAKING NEWS: ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾಗಿ ‘ಬೇಳೂರು ಸುದರ್ಶನ್’ ನೇಮಕ