ಬೆಂಗಳೂರು: ಈಗಾಗಲೇ ರಾಜ್ಯದ ವಿವಿಧೆಡೆ ಅಕಾಲಿಕ ಆಲಿಕಲ್ಲು ಸಹಿತ ಮಳೆಯಿಂದಾಗಿ ( Rain ) ರೈತ ಬೆಳೆ ನಾಶಗೊಂಡಿವೆ. ಜನರು ಆಲಿಕಲ್ಲು ಮಳೆಗೆ ತತ್ತರಿಸಿ ಹೋಗಿದ್ದರು. ಈ ಬೆನ್ನಲ್ಲೇ ಮಾರ್ಚ್ 24ರಿಂದ ಮತ್ತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ( Meteorological Department – IMD ) ಮುನ್ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯು, ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯದ ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರು, ಉಡುಪಿ, ಬೀದರ್, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಮುಂದಿನ 2 ದಿನ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ.
ಅಂದಹಾಗೆ ಕಳೆದ ಭಾನುವಾರದಂದು ಮೈಸೂರಿನ ಹುಣಸೂರು, ತುಮಕೂರಿನ ಚಿಕ್ಕನಾಯಕನಹಳ್ಳಿ, ಉಡುಪಿಯ ಬ್ರಹ್ಮಾವರ, ಬಳ್ಳಾರಿಯ ಹಗರಿಬೊಮ್ಮನಹಳ್ಳಿ, ಚಾಮರಾಜನಗರದ ಹರದಹಳ್ಳಿ ಹಾಗೂ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾಗಿತ್ತು. ಆಲಿಕಲ್ಲಿನ ಬೆಳ್ಳನೆಯ ರಾಶಿ ಕಂಡ ಜನರು ಕರ್ನಾಟಕ ಹಿಮಾಲಯವಾಗಿದೆ ಎಂಬುದಾಗಿ ಅಚ್ಚರಿಗೊಂಡಿದ್ದರು. ಈ ಬೆನ್ನಲ್ಲೆ ಮಾರ್ಚ್ 24ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಆಲಿಕಲ್ಲು ಸಹಿತ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ: ನಾಳೆ ಸಾಗರ ತಾಲೂಕು ಸಾಹಿತ್ಯ ಸಮ್ಮೇಳನ, ಒಂದು ದಿನ ಸರ್ಕಾರಿ ನೌಕರರಿಗೆ ಓಓಡಿ ಸೌಲಭ್ಯ ಮಂಜೂರು
BIG NEWS: ಚೆನ್ನಗಿರಿಯಲ್ಲಿ ಬಿಜೆಪಿ vs ಬಿಜೆಪಿ ನಡುವೆ ತಾರಕಕ್ಕೇರಿದ ಸಮರ: ಅರ್ಧಕ್ಕೆ ನಿಂತ ವಿಜಯಸಂಕಲ್ಪ ಯಾತ್ರೆ