Breaking: ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಕೇಸ್: ಸಿಬಿಐನಿಂದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಅರೆಸ್ಟ್..!

ಡಿಜಿಟಲ್‌ ಡೆಸ್ಕ್:‌ ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಗುರು ರಾಘವೇಂದ್ರ ಬ್ಯಾಂಕ್ ನೂರಾರು ಕೋಟಿ ವಂಚಿಸಿರುವ ಆರೋಪ ಮೇಲೆ ಬ್ಯಾಂಕ್‌ ಅಧ್ಯಕ್ಷ ರಾಮಕೃಷ್ಣ ಮೇಲೆ ಕೇಸ್‌ ದಾಖಲಿಸಲಾಗಿತ್ತು. ನಕಲಿ ಖಾತೆ ಸೃಷ್ಠಿಸಿ ವಂಚನೆ ಆರೋಪವೂ ಇವರ ಮೇಲಿತ್ತು. ಇನ್ನು ಈ ಕೇಸ್ ದಾಖಲಾಗ್ತಿದ್ದಂತೆ ಪರಾರಿಯಾಗಿದ್ದ ರಾಮಕೃಷ್ಣ ಸಧ್ಯ ಸಿಐಡಿ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನು ಈತ ರಾಜ್ಯಸಭಾ ಚುನಾವಣೆಗೂ ಸ್ಪರ್ಧಿಸಿದ್ದ ಎನ್ನುವುದನ್ನ ಕುತೂಹಲಕ್ಕೆ ಕಾರಣವಾಗಿದೆ.