ಕೆಎನ್ ಎನ್ ನ್ಯೂಸ್ ಡೆಸ್ಕ್ : 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಎಸ್ ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
12 ಗಂಟೆಗಳ ಕಾಲ ಸತತ ಪ್ರಯತ್ನ: ವಿಷನ್ಸರ್ ಸರೋವರದ ಬಳಿ ಸಿಲುಕಿದ್ದ 17 ಚಾರಣಿಗರನ್ನು ರಕ್ಷಿಸಿದ ಭಾರತೀಯ ಸೇನೆ
ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರ ನೇತೃತ್ವದ ಪೀಠವು ಈ ತೀರ್ಪು ನೀಡಿದೆ. ವರದಿಯನ್ನು ಸ್ವೀಕರಿಸುವುದರ ವಿರುದ್ಧ ಜಾಫ್ರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.2002ರ ಗುಜರಾತ್ ಗಲಭೆ ಪ್ರಕರಣದ ವೇಳೆ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನ ಸಂಸದ ಆಸಾನ್ ಜಫ್ರಿ ಮೃತಪಟ್ಟಿದ್ದರು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿದಂತೆ ಕೆಲ ಮಂದಿಗಳನ್ನು ಆರೋಪಿಯಾಗಿ ಮಾಡಲಾಗಿತ್ತು. ಈ ಗಲಭೆ ವಿಚಾರಣೆ ಕೈಗೆತ್ತಿಕೊಂಡ ಎಸ್ ಐಟಿ ಮೋದಿಗೆ ಕ್ಲೀನ್ ಚೀಟ್ ನೀಡಿತ್ತು.
12 ಗಂಟೆಗಳ ಕಾಲ ಸತತ ಪ್ರಯತ್ನ: ವಿಷನ್ಸರ್ ಸರೋವರದ ಬಳಿ ಸಿಲುಕಿದ್ದ 17 ಚಾರಣಿಗರನ್ನು ರಕ್ಷಿಸಿದ ಭಾರತೀಯ ಸೇನೆ