ಕೆಎನ್ಎನ್ ಡಿಜಿಟಲ್ ಡೆಸ್ಕ್ : ಶ್ವಾನಗಳು ಸಾಮಾನ್ಯವಾಗಿ 10-15 ವರ್ಷಗಳವರೆಗೆ ಬದುಕುತ್ತವೆ. ಆದರೆ ಇಲ್ಲೊಂದು ಶ್ವಾನವೊಂದು ಬರೋಬ್ಬರಿ 30 ವರ್ಷಗಳವರೆಗೆ ಬದುಕಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದೆ.
ದಾಖಲೆ ನಿರ್ಮಿಸಿದ ಶ್ವಾನದ ಹೆಸರು ಬಾಬಿ. ಬಾಬಿ ಕೋಸ್ಟಾ ಕುಟುಂಬದೊಂದಿಗೆ ಪೋರ್ಚುಗಲ್‌ನ ಲೀರಿಯಾ ಪ್ರಾಂತ್ಯದ ಕಾಂಕ್ವಿರೋಸ್ ನಗರದ ಹಳ್ಳಿಯಲ್ಲಿ ವಾಸಿಸುತ್ತಿದೆ. ಬಾಬಿಗೆ 30 ವರ್ಷ ದಾಟಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಬಾಬಿ ಫೆಬ್ರವರಿ 1, 2023 ರಂದು 30 ವರ್ಷ 266 ದಿನಗಳನ್ನು ಪೂರೈಸಿದೆ. ಇದು ರಾಫೀರೊ ಡೊ ಅಲೆಂಟೆಜೊ ತಳಿಯದ್ದಾಗಿದೆ. ಶ್ವಾನ ಬಾಬಿ ಶತಮಾನದ ಹಳೆಯ ದಾಖಲೆಯನ್ನು ಮುರಿದಿದೆ.
ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾದ ಶ್ವಾನ ಬ್ಲೂಯ್ ಹೆಸರಿನಲ್ಲಿತ್ತು. ಬ್ಲೂಯ್ 1910 ರಿಂದ 1939 ರವರೆಗೆ ಜೀವಂತವಾಗಿತ್ತು. ಎರಡು ವಾರಗಳ ಹಿಂದೆ, ಸ್ಪೈಕ್ ಎಂಬ ನಾಯಿಯು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಾಸಿಸುವ ಅತ್ಯಂತ ವಯಸ್ಸಾದ ಶ್ವಾನ ಎಂದು ಗುರುತಿಸಲ್ಪಟ್ಟಿದೆ.
Intresting Fact : ಮುಸ್ಲಿಂ ದೇಶದಲ್ಲಿದೆ ಮನಮೋಹಕ ಹಿಂದೂ ದೇವಾಲಯ, ‘ವಿಷಕಾರಿ ಸರ್ಪ’ಗಳೇ ಇದಕ್ಕೆ ಕಾವಲು.!
’13 ಜನರನ್ನ ಮಂಚದ ಮೇಲೆ ಮಲಗಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ನಾಚಿಕೆ ಆಗ್ಬೇಕು’ : ಸಿ.ಎಂ ಇಬ್ರಾಹಿಂ ವಾಗ್ಧಾಳಿ
BIG NEWS: ಪ್ರಹ್ಲಾದ್ ಜೋಷಿ ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ: ಕೇಂದ್ರ ಸಚಿವರ ವಿರುದ್ಧ HDK ಹೊಸ ಬಾಂಬ್