ಹಾವೇರಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ಜಿಲ್ಲೆಯ ಆಯ್ದ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ( moulana azad school ) ಅತಿಥಿ ಶಿಕ್ಷಕರಾಗಿ ( Guest Teacher Job ) ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
‘ಎಣ್ಣೆ ಪ್ರಿಯ’ರೇ ಗಮನಿಸಿ: ರಾಜ್ಯದಲ್ಲಿ ಡಿ.8ರ ಸಂಜೆ 4ರಿಂದ 2 ದಿನ ‘ಮದ್ಯ ಮಾರಾಟ’ ನಿಷೇಧ
ಹಾವೇರಿ ನಗರದ ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿಜ್ಞಾನ, ಸವಣೂರ ಶಾಲೆಗೆ ವಿಜ್ಞಾನ ಹಾಗೂ ಇಂಗ್ಲೀಷ್, ಶಿಗ್ಗಾಂವ ಶಾಲೆಗೆ ಉರ್ದು, ಬ್ಯಾಡಗಿ ಹಾಗೂ ಕಾಗಿನೆಲೆ ಶಾಲೆಗಳಿಗೆ ವಿಜ್ಞಾನ ಬೋಧಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಶಾಲೆಗಳಿಗೆ ಡಿಸೆಂಬರ್ 10 ರೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08375-234505 ಗೆ ಸಂಪರ್ಕಿಸಬಹುದು.
ರಾಜ್ಯದಲ್ಲಿ ಒಮಿಕ್ರಾನ್ ವೈರಸ್ 2 ಪ್ರಕರಣಗಳು ಮಾತ್ರ, ಸಂಪರ್ಕಿತರಿಗೆ ಸೋಂಕು ಕಂಡು ಬಂದಿಲ್ಲ – ಸಚಿವ ಸುಧಾಕರ್