ಬೆಂಗಳೂರು : ಕುರಿಗಾಹಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 1.70 ಸಾವಿರ ಸಹಾಯಧನ ಬಿಡುಗಡೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ.

ನಿನ್ನೆ (ಡಿ.8) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆದಿದ್ದು, ಸಭೆಯಲ್ಲಿ ಕುರಿಗಾಯಿಗಳಿಗೆ ಸಹಾಯಧನ, ಸೇರಿದಂತೆ ವಿವಿಧ ಮಹತ್ವದ ನಿರ್ಣಯಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

ಅಮೃತ ಸ್ವಾಭಿಮಾನ ಯೋಜನೆ ಅನುಷ್ಠಾನಕ್ಕಾಗಿ 92 ಕೋಟಿ ಸಹಾಯಧನವನ್ನ ಘೋಷಿಸಿಲಾಗಿದೆ. ಪ್ರತಿ ಕುರಿಗಾಗಿಗೆ 21 ಕುರಿ ಸಾಕಲು ಅವಕಾಶ ನೀಡಲಾಗುತ್ತದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಅಮೃತ ಸ್ವಾಭಿಮಾನ ಯೋಜನೆ ಅನುಷ್ಠಾನಕ್ಕಾಗಿ 92 ಕೋಟಿ ಸಹಾಯಧನವನ್ನ ಘೋಷಿಸಿಲಾಗಿದೆ. ಪ್ರತಿ ಕುರಿಗಾಗಿಗೆ 21 ಕುರಿ ಸಾಕಲು ಅವಕಾಶ ನೀಡಲಾಗುತ್ತದೆ ಎಂದರು. ಜಲಜೀವನ್ ಮಿಷನ್ ಯೋಜನೆಯಡಿ ಸೊನ್ನ ಗ್ರಾಮಕ್ಕೆ ನೀರು ಪೂರೈಕೆಗೆ 37 ಕೋಟಿ ಅನುದಾನ ಒದಗಿಸಲಾಗುತ್ತಿದೆ. ವಿವಿಪುರ ಇತರ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗೆ 36 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಹಂದಿಹಾಳ್, ಮೀನಹಳ್ಳಿ ಯೋಜನೆಗೆ 47 ಕೋಟಿ, ಕುಡಿಯುವ ನೀರು ಪೂರೈಕೆಗೆ ಹಣ ನೀಡಿಕೆ ಮಾಡಲಾಗುತ್ತಿದೆ ಎಂದರು.ಸಾರಿಗೆ ಸಂಸ್ಥೆ ಅಧಿಕಾರಿಗಳ ಹಂಚಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಗ್ರೇಡ್ 1 ಹುದ್ದೆಗಳನ್ನ ಸಾಮಾನ್ಯವಾಗಿಡಲಾಗುತ್ತದೆ. ಉಳಿದ ಜೂನಿಯರ್ ಹುದ್ದೆ ನಾಲ್ಕು ಸಂಸ್ಥೆಗೆ ನೀಡಲಾಗುತ್ತದೆ. ಸೀನಿಯರ್ ಗ್ರೇಡ್ 1 ಅಧಿಕಾರಿ ಕೆಎಸ್ ಆರ್ಟಿಗೆ ಇರ್ತಾರೆ ಎಂದು ತಿಳಿಸಿದರು.

921 ಎಲೆಕ್ಟ್ರಿಕ್ ಬಸ್ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ. ಬಿಎಂಟಿಸಿಗೆ ಹೊಸ ಬಸ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೇಂದ್ರದ ಸಬ್ಸಿಡಿ ನೆರವಿನಲ್ಲಿಬಸ್ ಖರೀದಿ ಮಾಡಲಾಗುತ್ತಿರುವುದಾಗಿ ಹೇಳಿದರು.ಕನಕಭವನದ ನಿರ್ವಹಣೆ ಹೊಣೆ ಕನಕಗುರಪೀಠಕ್ಕೆ ನೀಡಿಕೆ ಮಾಡಲಾಗುತ್ತಿದೆ. 900 ಚದರ ಮೀಟರ ವಿಸ್ತೀರ್ಣದ ಹೊಣೆಗಾರಿಕೆ ನೀಡಲಾಗುವುದು ಎಂದು ತಿಳಿಸಿದರು.

ಬೆಳಗಾವಿ ಗಡಿ ವಿವಾದ : ನಮ್ಮ ನಿಲುವು ಸ್ಪಷ್ಟವಾಗಿದೆ ಎಂದ ಸಿಎಂ ಬೊಮ್ಮಾಯಿ |Belagavi Border dispute

ಬೀದಿಬದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಪ್ರಧಾನ ಮಂತ್ರಿ ʻಸ್ವನಿಧಿʼ ಯೋಜನೆ ವಿಸ್ತರಣೆ, ಇಲ್ಲಿದೆ ಮಾಹಿತಿ

Share.
Exit mobile version