ಚೆನ್ನೈ: ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು 33 ವರ್ಷದ ಮಹಿಳೆಯ ಹೆರಿಗೆಯನ್ನು ವಿಡಿಯೋ ಕಾಲ್ ಮೂಲಕ ಮೇಲ್ವಿಚಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಇದರ ಪರಿಣಾಮ ಮಗು ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಗಂಭೀರವಾಗಿರುವ ಘಟನೆ ಸೋಮವಾರ ತಮಿಳುನಾಡಿನ ಚೆಂಗಲ್ಪಟ್ಟು ಎಂಬಲ್ಲಿ ನಡೆದಿದೆ.

ಏನಿದು ಘಟನೆ?

ಸುಣಂಬೇಡಿನ ಪುಷ್ಪಾ(33) ಎಂಬ ಗರ್ಭಿಣಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ನಿತ್ಯ ತಪಾಸಣೆ ನಡೆಸಲಾಗುತ್ತಿತ್ತು. ಈಕೆ ಸೋಮವಾರ ಮಗುವಿಗೆ ಜನ್ಮ ನೀಡಬೇಕಾಗಿತ್ತು. ಹೀಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಪತಿ ಜೊತೆ ಬಂದಿದ್ದರು. ತಪಾಸಣೆ ನಡೆಸಿದ ವೈದ್ಯರು ಹೆರಿಗೆ ನೋವು ಕಾಣಿಸಿಕೊಂಡ ನಂತ್ರ ಆಸ್ಪತ್ರೆಗೆ ಬನ್ನಿ ಎಂದು ಸೂಚಿಸಿದ್ದಾರೆ. ಅದೇ ದಿನ ಮಧ್ಯಾಹ್ನದ ವೇಳೆಗೆ ಪುಷ್ಪಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಾಪಸ್‌ ಅದೇ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ಡ್ಯೂಟಿ ಡಾಕ್ಟರ್​ ಇರಲಿಲ್ಲ.

ಈ ವೇಳೆ ಆಕೆಗೆ ಸ್ಕ್ಯಾನ್ ಮಾಡಲಾಗಿದ್ದು, ಗರ್ಭದಲ್ಲಿ ಮಗು ತಲೆಕೆಳಗಾಗಿರುವುದು ತಿಳಿದುಬಂದಿದೆ. ಆದ್ರೂ, ಇದನ್ನು ಗಮನಕ್ಕೆ ತೆಗೆದುಕೊಳ್ಳದ ನರ್ಸ್​​​ಗಳು ತಾವಾಗಿಯೇ ಹೆರಿಗೆ ಮಾಡಲು ಮುಂದಾಗಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಮಗು ತಲೆಕೆಳಗಾಗಿ ಗರ್ಭದಿಂದ ಕಾಲುಗಳು ಹೊರಬರಲು ಶುರುವಾಗಿವೆ. ಇದರಿಂದ ಗಾಬರಿಗೊಂಡ ನರ್ಸ್‌ಗಳು ಶೀಘ್ರವೇ ವೀಡಿಯೊ ಕರೆ ಮೂಲಕ ಕರ್ತವ್ಯ ವೈದ್ಯರನ್ನು ಸಂಪರ್ಕಿಸಿದರು. ನಂತರ ವೈದ್ಯರು ಮಗುವಿನ ತಲೆಯನ್ನು ಹೊರತೆಗೆಯುವುದು ಹೇಗೆ ಎಂದು ನರ್ಸ್‌ಗಳಿಗೆ ಮಾರ್ಗದರ್ಶನ ನೀಡಿದರು. ಆದಾಗ್ಯೂ, ಹಲವಾರು ಬಾರಿ ಪ್ರಯತ್ನಿಸಿದ ನಂತರ ನರ್ಸ್‌ಗಳು ವಿಫಲರಾದರು.

ಪುಷ್ಪಾ ಸ್ಥಿತಿ ಗಂಭೀರವಾದ್ದರಿಂದ ಅವರನ್ನು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಮಧುರಾಂತಗಂ ಜಿಹೆಚ್‌ಗೆ ಕಳುಹಿಸಿದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಮಾರ್ಗಮಧ್ಯೆ ಮಗು ಗರ್ಭದಿಂದ ಹೊರ ಬಂದಿದ್ದು ಸಾವನ್ನಪ್ಪಿದೆ.

ಸುದ್ದಿ ತಿಳಿದ ಸುಣಂಬೇಡು ಗ್ರಾಮಸ್ಥರು ಆಸ್ಪತ್ರೆ ಎದುರು ಜಮಾಯಿಸಿ ವೈದ್ಯ ಹಾಗೂ ನರ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಶಾಂತಿ ಮಾತುಕತೆ ನಡೆಸಿ, ವಿಚಾರಣೆ ನಡೆಸಿ ವೈದ್ಯರು ಹಾಗೂ ನರ್ಸ್‌ಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

BIG NEWS: ಯುಕೆಯನ್ನು ಹಿಂದಿಕ್ಕಿ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಯುಕೆ ಹೈ ಕಮಿಷನರ್

Job Alert : ಮೌಲಾನಾ ಆಜಾದ್ ಮಾದರಿ ಶಾಲಾ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

BIG NEWS: ಬಿಜೆಪಿಯಿಂದಲೂ ಪೋಸ್ಟ್‌ ವಾರ್‌; ಕಾಂಗ್ರೆಸ್‌ PAY CM ಅಸ್ತ್ರಕ್ಕೆ ಬಿಜೆಪಿ ಪ್ರತ್ಯಾಸ್ತ್ರ

Share.
Exit mobile version