ಕ್ಯಾಲಿಫೋರ್ನಿಯಾ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಸಂಭವಿಸಿದ ಪರಿಣಾಮ ಅಲ್ಲಿನ ಗವರ್ನರ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದ ಬಳಿ ವೇಗವಾಗಿ ಹರಡುತ್ತಿರುವ ಬೆಂಕಿಯನ್ನು ನಂದಿಸಲು 400 ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ.

ಶನಿವಾರ ಬೆಂಕಿಯು ವೇಗವಾಗಿ ಎಲ್ಲೆಡೆ ಆವರಿಸಿದೆ. ಹೀಗಾಗಿ, ಅಲ್ಲಿಂದ ಸಾವಿರಾರು ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಇನ್ನೂ, 2,000 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಎದುರಾಗಿರುವ ಅತಿದೊಡ್ಡ ಕಾಡ್ಗಿಚ್ಚು ಇದಾಗಿದೆ.

ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಫಾರೆಸ್ಟ್ರಿ ಅಂಡ್ ಫೈರ್ ಪ್ರೊಟೆಕ್ಷನ್ ಅಥವಾ ಕ್ಯಾಲ್ ಫೈರ್ ಪ್ರಕಾರ, ಶುಕ್ರವಾರ ಮಧ್ಯಾಹ್ನ ಮಾರಿಪೋಸಾ ಕೌಂಟಿಯ ಮಿಡ್ಪೈನ್ಸ್ ಪಟ್ಟಣದ ಸಮೀಪವಿರುವ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶನಿವಾರದ ವೇಳೆಗೆ ಸುಮಾರು 19 ಚದರ ಮೈಲಿ (48 ಚದರ ಕಿ.ಮೀ.) ದೂರದವರೆಗೂ ಹರಡಿದೆ. ಹೀಗಾಗಿ ಅಲ್ಲಿಂದ 6,000 ಕ್ಕೂ ಹೆಚ್ಚು ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದೆ ಎಂದು ಸಿಯೆರಾ ರಾಷ್ಟ್ರೀಯ ಅರಣ್ಯದ ವಕ್ತಾರ ಡೇನಿಯಲ್ ಪ್ಯಾಟರ್ಸನ್ ಹೇಳಿದ್ದಾರೆ.

ಬೆಂಕಿಯ ಆವರಿಸುವಿಕೆಯಿಂದಾಗಿ ಉಂಟಾಗುವ ಅಪಾಯ ತಡೆಗಾಗಿ ಗವರ್ನರ್ ಗೇವಿನ್ ನ್ಯೂಸಮ್ ಶನಿವಾರ ಮಾರಿಪೋಸಾ ಕೌಂಟಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

BIGG BREAKING NEWS : ದೇಶದಲ್ಲಿ ಮತ್ತೆ ಇಳಿಕೆ ಕಂಡ ಕೊರೊನಾ : 24 ಗಂಟೆಯಲ್ಲಿ 20,279 ಕೇಸ್ ಪತ್ತೆ

BIGG NEWS : ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ ಬಹುಮಹಡಿ ವಸತಿ ಗೃಹಗಳ ಬೆಲೆ 1 ಲಕ್ಷ ರೂ. ಇಳಿಕೆ

Big news:‌ 2025ರ ವೇಳೆಗೆ ಭಾರತದಲ್ಲಿ ʻಶ್ವಾಸಕೋಶದ ಕ್ಯಾನ್ಸರ್ʼ ಪ್ರಕರಣಗಳು 7 ಪಟ್ಟು ಏರಿಕೆ ಸಾಧ್ಯತೆ: ಅಧ್ಯಯನ

Share.
Exit mobile version