‘ತನ್ನ ವಿಶೇಷ ಸ್ನೇಹಿತರ ಜೇಬು ಭರ್ತಿ ಮಾಡುವುದ್ರಲ್ಲಿ ಸರ್ಕಾರ ಫುಲ್‌ ಬ್ಯುಸಿ: ರಾಹುಲ್‌ ಗಾಂಧಿ..! – Kannada News Now


India

‘ತನ್ನ ವಿಶೇಷ ಸ್ನೇಹಿತರ ಜೇಬು ಭರ್ತಿ ಮಾಡುವುದ್ರಲ್ಲಿ ಸರ್ಕಾರ ಫುಲ್‌ ಬ್ಯುಸಿ: ರಾಹುಲ್‌ ಗಾಂಧಿ..!

ನವದೆಹಲಿ: ಕೇಂದ್ರ ಸರ್ಕಾರದ ಮೇಲೆ ಮತ್ತೊಮ್ಮೆ ಹರಿಹಾಯ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸರ್ಕಾರ ತನ್ನ ವಿಶೇಷ ಸ್ನೇಹಿತರ ಜೇಬು ಭರ್ತಿ ಮಾಡುವುದರಲ್ಲಿ ಫುಲ್‌ ಬ್ಯುಸಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಹಸಿವು ಸೂಚ್ಯಂಕದ ವರದಿ ಇಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕ‌, ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಬಡವರ ಹಿತ ಮರೆತಿದೆ ಎಂದು ಆರೋಪಿಸಿದ್ದಾರೆ.

ಈ ಬಾರಿಯ ಜಾಗತಿಕ ಹಸಿವು ಸೂಚ್ಯಂಕ ಬಿಡುಗಡೆಯಾಗಿದ್ದು,107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94ನೇ ಸ್ಥಾನದಲ್ಲಿದ್ರೆ,
ನೇಪಾಳ ಮತ್ತು ಬಾಂಗ್ಲಾದೇಶ ಕ್ರಮವಾಗಿ 73 ಮತ್ತು 75 ನೇ ಸ್ಥಾನದಲ್ಲಿವೆ. ಇನ್ನು ಪಾಕಿಸ್ತಾನ 88 ನೇ ಸ್ಥಾನದಲ್ಲಿದೆ.
error: Content is protected !!