ಕೊಲಂಬೊ : ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವ್ರು ಮಂಗಳವಾರ ಸಿಂಗಾಪುರಕ್ಕೆ ಬಂದಿಳಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿರುವುದನ್ನು ಕೇಳಿದ ರಾಜಧಾನಿ ಕೊಲಂಬೋದ ಜನರು ಸಂಭ್ರಮಾಚರಣೆಯಲ್ಲಿ ಪಟಾಕಿಗಳನ್ನು ಸಿಡಿಸಿದರು. ಇನ್ನು ರಾಜಪಕ್ಸೆ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಲಾಗಿದೆ ಎಂದು ಸಂಸತ್ ಸ್ಪೀಕರ್ ದೃಢಪಡಿಸಿದ್ದಾರೆ.

ಅಧ್ಯಕ್ಷರ ಅರಮನೆ, ಅಧ್ಯಕ್ಷೀಯ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ ಸೇರಿದಂತೆ ಅಧಿಕೃತ ಕಟ್ಟಡಗಳ ತಮ್ಮ ಸ್ವಾಧೀನವನ್ನ ಕೊನೆಗೊಳಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ ದಿನವೇ ರಾಷ್ಟ್ರಪತಿಗಳ ರಾಜೀನಾಮೆ ಬಂದಿದೆ.

ಈ ನಡುವೆ ಶ್ರೀಲಂಕಾದ ಮಾಜಿ ಅಧ್ಯಕ್ಷರು “ಖಾಸಗಿ ಭೇಟಿ” ಯಲ್ಲಿದ್ದಾರೆ ಮತ್ತು ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಸಿಂಗಾಪುರ ಸರ್ಕಾರ ಹೇಳಿದೆ.

Share.
Exit mobile version