ಸುಭಾಷಿತ :

Wednesday, January 22 , 2020 12:13 PM

ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗೆ ಬದಲಾಗಿ 10 ಫೋನ್ ನೀಡಿದ ಗೂಗಲ್


Saturday, April 20th, 2019 9:11 am

ಸ್ಯಾನ್ ಫ್ರಾನ್ಸಿಸ್ಕೋ: ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಗೂಗಲ್ ಕಂಪನಿಗೆ ಗ್ರಾಕರೊಬ್ಬರು ಮನವಿ ಮಾಡಿದ್ದಾರೆ. ಆದರೆ ಕಂಪನಿ ಹಣದ ಬದಲು ಗ್ರಾಹಕನಿಗೆ 10 ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗಳನ್ನು ನೀಡಿ ಅಚ್ಚರಿ ಮೂಡಿಸಿದೆ.

ಗ್ರಾಹಕರ ಸಮಸ್ಯೆಗೆ ಪ್ರತಿ ಕಂಪನಿ ಸ್ಪಂಧಿಸುತ್ತದೆ. ಆದರೆ ಗೂಗಲ್ ಹಣ ಮರುಪಾವತಿ ಮಾಡುವ ಬದಲು 9 ಸಾವಿರ ಡಾಲರ್ ಮೌಲ್ಯದ 10 ಫೋನ್ ಗಳನ್ನು ಗ್ರಾಹಕನಿಗೆ ನೀಡಿ ಗಮನ ಸೆಳೆದಿದೆ.

ಗ್ರಾಹಕ ತನ್ನ ದೋಷಯುಕ್ತ ಪಿಕ್ಸೆಲ್ 3 ಫೋನ್ ವಾಪಸ್ ನೀಡಿದ ನಂತರ ಗೂಗಲ್ ಕಂಪನಿ ಹಣ ವಾಪಸ್ ನೀಡಿಲ್ಲ. ಬದಲಾಗಿ 10 ಪಿಕ್ಸೆಲ್ ಫೋನ್ ಗಳನ್ನು ನೀಡಿದೆ ಎಂದು ಆಂಡ್ರಾಯ್ಡ್ ಪೋಲಿಸ್ ಗುರುವಾರ ವರದಿ ಮಾಡಿದೆ.

 ಗೂಗಲ್ ಪಿಕ್ಸೆಲ್ ಫೋನ್ ಗಳನ್ನು ಮರಳಿಸುವಂತೆ ಗ್ರಾಹಕನಿಗೆ ಒತ್ತಡ ಹಾಕಿಲ್ಲ. ಆದರೆ ಗ್ರಾಹಕ ಮಾತ್ರ ಅವುಗಳನ್ನು ಮರಳಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions