ಸುಭಾಷಿತ :

Friday, April 3 , 2020 7:27 AM

`ಅತಿಥಿ ಉಪನ್ಯಾಸಕರಿಗೆ ಯುಜಿಸಿಯಿಂದ ಭರ್ಜರಿ ಗುಡ್ ನ್ಯೂಸ್’ : ಗರಿಷ್ಠ 50 ಸಾವಿರ ರೂ. ಸಂಬಳ ನೀಡಲು ನಿರ್ಧಾರ


Friday, August 30th, 2019 3:11 pm

ಬೆಂಗಳೂರು : ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಕುಲಪತಿಗಳಿಗೆ ಸೂಚನೆ ನೀಡಿದೆ. ಈ ಮೂಲಕ, ಮಾಸಿಕ ಗರಿಷ್ಠ 50 ಸಾವಿರ ರೂ.ವರೆಗೆ ವೇತನ ನೀಡಬೇಕಿದೆ.

ಅತಿಥಿ ಉಪನ್ಯಾಸಕರಿಗೂ 7 ನೇ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಗೌರವಧನ ನೀಡಬೇಕೆಂದು ವಿವಿ ಧನ ಸಹಾಯ ಆಯೋಗ ಇತ್ತೀಚಿಗೆ ನಡೆಸಿದ 537 ನೇ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ನೇಮಕದಿಂದ ವೇತನದವರೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಬಿಡುಗಡೆ ಮಾಡಿದೆ.

ಯುಜಿಸಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನಿಗದಿ ಪಡಿಸಿರುವ ವಿದ್ಯಾರ್ಹತೆ ಮತ್ತು ಅರ್ಹತೆಗಳೇ ಅತಿಥಿ ಉಪನ್ಯಾಸಕರಿಗೂ ಅನ್ವಯವಾಗಲಿದೆ. ಈ ಎಲ್ಲ ನಿಯಮಗಳನ್ನು ಜ. 28 ರಿಂದಲೇ ಜಾರಿಯಾಗಿದೆ. ಇನ್ನು ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 14 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions