ನವದೆಹಲಿ : ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆ, ಮೋದಿ ಸರ್ಕಾರವು 2017ರಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶದಲ್ಲಿ ಪ್ರಾರಂಭಿಸಿತು. ಈಗ ಈ ಕಾರ್ಯಕ್ರಮದ ಭಾಗವಾಗಿ ದೇಶಾದ್ಯಂತ 766 ಜಿಲ್ಲೆಗಳ ಪೈಕಿ 743 ಜಿಲ್ಲೆಗಳಲ್ಲಿ 10,000 ಜನೌಷಧಿ ಕೇಂದ್ರಗಳನ್ನ ತೆರೆಯಲಾಗುವುದು. ಇದರ ಪ್ರಾರಂಭದೊಂದಿಗೆ, ಅತಿ ಶೀಘ್ರದಲ್ಲಿ ಜನಸಾಮಾನ್ಯರಿಗೆ ದೇಶದ ಮೂಲೆ ಮೂಲೆಗಳಲ್ಲಿ ಅಗ್ಗದ ಔಷಧಗಳು ಲಭ್ಯವಾಗಲಿವೆ.

ಭಾರತೀಯ ಜನೌಷಧಿ ಕೇಂದ್ರದಲ್ಲಿ ಜೆನೆರಿಕ್ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆ ಬ್ರಾಂಡೆಡ್ ಔಷಧಗಳಿಗಿಂತ ಶೇ.50ರಿಂದ 90ರಷ್ಟು ಕಡಿಮೆ. ಮಾರ್ಚ್ 2024 ರ ವೇಳೆಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಕೇಂದ್ರಗಳು ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನ ಒದಗಿಸುತ್ತವೆ.

18,000 ಕೋಟಿಗಳ ಉಳಿತಾಯ.!
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ ಕಳೆದ 8 ವರ್ಷಗಳಲ್ಲಿ ಸುಮಾರು ರೂ.18,000 ಕೋಟಿಗಳನ್ನ ಉಳಿಸಲಾಗಿದೆ. ಸರ್ಕಾರವು ದೇಶಾದ್ಯಂತ 766 ಜಿಲ್ಲೆಗಳ ಪೈಕಿ 743 ಜಿಲ್ಲೆಗಳನ್ನ ಒಳಗೊಂಡ 10,000 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಈ ಕೇಂದ್ರಗಳನ್ನ ನವೆಂಬರ್ 2008 ರಲ್ಲಿ ಭಾರತ ಸರ್ಕಾರದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆಯು ಪ್ರಾರಂಭಿಸಿತು. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಡಿಸೆಂಬರ್ 2017 ರಲ್ಲಿ 3,000 ಕೇಂದ್ರಗಳನ್ನ ತೆರೆಯುವ ಗುರಿಯನ್ನ ಸಾಧಿಸಿವೆ. ಮಾರ್ಚ್ 2020ರಲ್ಲಿ, ಈ ಕೇಂದ್ರಗಳ ಸಂಖ್ಯೆ 6,000 ಕ್ಕೆ ಏರಿತು. ಕಳೆದ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 8,610 ರಿಂದ 10,000 ತಲುಪುವ ನಿರೀಕ್ಷೆಯಿದೆ.

ಆದರೆ, ಈ ಕೇಂದ್ರಗಳಲ್ಲಿ 1,759 ಔಷಧಗಳು ಮತ್ತು 280 ಶಸ್ತ್ರಚಿಕಿತ್ಸಾ ಉಪಕರಣಗಳು ಲಭ್ಯವಿವೆ. ಮಾರ್ಚ್ 2024ರ ವೇಳೆಗೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನ 10,000ಕ್ಕೆ ಹೆಚ್ಚಿಸುವ ಗುರಿಯನ್ನ ಸರ್ಕಾರ ಹೊಂದಿದೆ. 2021-22ನೇ ಹಣಕಾಸು ವರ್ಷದಲ್ಲಿ ಜನೌಷಧಿ ಕೇಂದ್ರಗಳ ಮೂಲಕ 893.56 ಕೋಟಿ ಮೌಲ್ಯದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನ ಮಾರಾಟ ಮಾಡಲಾಗಿದೆ. ಈ ರೀತಿಯಾಗಿ, ಬ್ರಾಂಡೆಡ್ ಔಷಧಿಗಳಿಗೆ ಹೋಲಿಸಿದ್ರೆ, ದೇಶವಾಸಿಗಳು 5,300 ಕೋಟಿ ರೂ.ಗಳನ್ನ ಉಳಿಸಲು ಸಾಧ್ಯವಾಗಿದೆ.

 

BIGG NEWS : ಸಿದ್ದೇಶ್ವರ ಶ್ರೀಗಳ ದರ್ಶನ ಮಾಡೋಕೂ ಪುಣ್ಯ ಮಾಡ್ಬೇಕು, ಆ ಪುಣ್ಯ ಪಡೆದುಕೊಂಡಿಲ್ಲ: ಶಾಸಕ ಜಮೀರ್ ಅಹ್ಮದ್

BREAKING NEWS: ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ: ಅಂತಿಮ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

Good News : ದೇಶದ ಜನತೆಗೆ ‘ಕೇಂದ್ರ ಸರ್ಕಾರ’ ಸೂಪರ್ ಆಫರ್ ; ಒಂದು ಲಕ್ಷ ಗೆಲ್ಲುವ ಅವಕಾಶ, ಡಿಟೈಲ್ಸ್ ಇಲ್ಲಿದೆ

Share.
Exit mobile version