Good News : ಕೇಂದ್ರ ಸರ್ಕಾರದಿಂದ ‘ಕೋಳಿ ಸಾಕಣೆ’ಗೆ ಶೇ.50ರಷ್ಟು ಸಹಾಯಧನದ ಜೊತೆಗೆ 50 ಲಕ್ಷ ರೂ. ಸಾಲ ಲಭ್ಯ

ನವದೆಹಲಿ : ಕೋಳಿ ಸಾಕಣೆ ಕೇಂದ್ರವನ್ನ ಸ್ಥಾಪಿಸುವ ಮೂಲಕ ಜೀವನೋಪಾಯವನ್ನ ಗಳಿಸಲು ಬಯಸುವವರಿಗೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿಯನ್ನ ನೀಡಿದೆ. ಕೋಳಿ ಸಾಕಣೆ ಕೇಂದ್ರ ಸ್ಥಾಪಿಸಲು ಶೇ.50ರಷ್ಟು ಸಬ್ಸಿಡಿಯೊಂದಿಗೆ 50 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ, ಸಾಲ ಪಡೆಯಲು ಬಯಸುವವರು ಒಂದು ಎಕರೆ ಭೂಮಿಯನ್ನ ಹೊಂದಿರಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ಜನರಿಗೆ ಸಾಲವನ್ನ ನೀಡುತ್ತವೆ. ಹೆಚ್ಚಿನ ವಿವರಗಳನ್ನ ಹತ್ತಿರದ ಪಶುಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಳ್ಳಬಹುದು.   … Continue reading Good News : ಕೇಂದ್ರ ಸರ್ಕಾರದಿಂದ ‘ಕೋಳಿ ಸಾಕಣೆ’ಗೆ ಶೇ.50ರಷ್ಟು ಸಹಾಯಧನದ ಜೊತೆಗೆ 50 ಲಕ್ಷ ರೂ. ಸಾಲ ಲಭ್ಯ