ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಹಣಕಾಸು ಕಂಪನಿ ಸಿಎಎಸ್ಇ ವಾಟ್ಸಾಪ್ ವ್ಯವಹಾರದ ಬಳಕೆದಾರರಿಗೆ ವಿಶಿಷ್ಟ ಸಾಲ ಸೌಲಭ್ಯವನ್ನ ಪ್ರಾರಂಭಿಸಿದೆ. ವಾಟ್ಸಾಪ್ ವ್ಯವಹಾರ ಖಾತೆಯನ್ನ ಹೊಂದಿರುವವರು ಕೇವಲ 30 ಸೆಕೆಂಡುಗಳಲ್ಲಿ ಸಾಲ ಪಡೆಯಬಹುದು. ಸಾಲವನ್ನು ಪಡೆಯಲು ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಸಾಲದ ಅರ್ಜಿದಾರರು ಫಾರ್ಮ್ʼಗಳನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೇ, ಸಾಲದ ಕೊಡುಗೆಗಳನ್ನ ಪಡೆಯಲು ಯಾವುದೇ ವಿಶೇಷ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅಗತ್ಯವೂ ಇಲ್ಲ.
ವಾಟ್ಸಾಪ್-ಸಿಎಎಸ್ಇ ತ್ವರಿತ ಸಾಲ ಪಡೆಯುವುದು ಹೇಗೆ?
ಬಳಕೆದಾರರು ವಾಟ್ಸಾಪ್ ಚಾಟ್ ಬಾಕ್ಸ್‌ನಲ್ಲಿ HI ಅಂತಾ ಟೈಪ್ ಮಾಡಿ, 8097553191 ಸಂಖ್ಯೆಗೆ ಕಳುಹಿಸಬೇಕು. ಈ ಹಂತವನ್ನ ಅನುಸರಿಸಿದ ನಂತ್ರ ಬಳಕೆದಾರರು ಪೂರ್ವ-ಅನುಮೋದಿತ ಮೊತ್ತವನ್ನ ಪಡೆಯುತ್ತಾರೆ.
ಇದು ಎಐ ಚಾಲಿತ ಕ್ರೆಡಿಟ್ ಲೈನ್ ಸೌಲಭ್ಯವಾಗಿದೆ. ಈ ಸೌಲಭ್ಯವನ್ನು 24*7 ಪಡೆಯಬಹುದು. ಆದಾಗ್ಯೂ, ಸಂಬಳ ಪಡೆಯುವ ಗ್ರಾಹಕರು ಮಾತ್ರ ಈ ಸೇವೆಯನ್ನು ಪಡೆಯಬಹುದು.
ಈ ಸೌಲಭ್ಯಕ್ಕೆ ಭೌತಿಕ KYM ತಪಾಸಣೆಯ ಅಗತ್ಯವಿಲ್ಲ. ಇಡೀ ಪರಿಶೀಲನಾ ಪ್ರಕ್ರಿಯೆಯನ್ನು ವಿದ್ಯುನ್ಮಾನವಾಗಿ ಪೂರ್ಣಗೊಳಿಸಲಾಗುವುದು. ಇದರ ನಂತರ, ಸಿಸ್ಟಮ್ ಕ್ರೆಡಿಟ್ ಲೈನ್ʼನ ಮೊತ್ತವನ್ನ ನಿರ್ಧರಿಸುತ್ತದೆ.
ಅಂದ್ಹಾಗೆ, ವಾಟ್ಸಾಪ್ ಭಾರತದಲ್ಲಿ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ. ಫೇಸ್ಬುಕ್ ಒಡೆತನದ ಕಂಪನಿಯು ಬಳಕೆದಾರರಿಗೆ ಪರಸ್ಪರ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.