ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan Mantri Kisan Samman Nidhi Yojana)ಯ ಫಲಾನುಭವಿಗಳಿಗೆ ಸಂತಸದ ಸುದ್ದಿಯಿದೆ. 10ನೇ ಕಂತು ಪಡೆಯಲು, ಮೋದಿ ಸರ್ಕಾರವು ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು (PM Kisan Beneficiary List) ಬಿಡುಗಡೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಹಣವನ್ನ ಡಿಸೆಂಬರ್ 15 ಮತ್ತು 25ರ ನಡುವೆ ಯಾವಾಗ ಬೇಕಾದರೂ ರೈತರ ಖಾತೆಗೆ ವರ್ಗಾಯಿಸಬಹುದು. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನ ಮೋದಿ ಸರ್ಕಾರ ಮಾಡಿದೆ. ಹಾಗಾಗಿ ನೀವು ತಕ್ಷಣ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? ಅನ್ನೋದನ್ನ ಪರಿಶೀಲಿಸಿ.
ಅಂದ್ಹಾಗೆ, ಸಣ್ಣ ಮತ್ತು ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಯಡಿ ರೈತರಿಗೆ ವರ್ಷದಲ್ಲಿ 3 ಕಂತುಗಳಲ್ಲಿ 6,000 ರೂ. ಪ್ರತಿ 4 ತಿಂಗಳಿಗೊಮ್ಮೆ ರೈತರು ತಮ್ಮ ಖಾತೆಯಲ್ಲಿ 2,000 ರೂ. ಪಡೆಯುತ್ತಾರೆ. ಈವರೆಗೆ ರೈತರ ಖಾತೆಗೆ 9 ಕಂತುಗಳಲ್ಲಿ ಹಣ ರವಾನೆಯಾಗಿದೆ. ಈಗ ಹತ್ತನೇ ಕಂತಿನ ಹಣ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಲಿದೆ.
ದೇಶದ 11.37 ಕೋಟಿ ರೈತರ ಖಾತೆಗೆ ಹಣ ಬಂದಿದೆ..!
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕಳೆದ ವರ್ಷ ಡಿಸೆಂಬರ್ 25, 2020 ರಂದು ಹಣವನ್ನು ವರ್ಗಾಯಿಸಿತ್ತು. ಇಲ್ಲಿಯವರೆಗೆ, ಸರ್ಕಾರವು ದೇಶದ 11.37 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 1.58 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನ ನೇರವಾಗಿ ವರ್ಗಾಯಿಸಿದೆ. ಇದೀಗ ಹತ್ತನೇ ಕಂತಿನ ಫಲಾನುಭವಿ ರೈತರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.
ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಈ ರೀತಿ ಪರಿಶೀಲಿಸಿ..!
1. ಮೊದಲು PM Kisan ನ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಹೋಗಿ.
2. ಇಲ್ಲಿ ನೀವು ಬಲಭಾಗದಲ್ಲಿ ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ಪಡೆಯುತ್ತೀರಿ.
3. ಇಲ್ಲಿ ಫಲಾನುಭವಿಗಳ ಪಟ್ಟಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.
4. ಹೊಸ ಪುಟದಲ್ಲಿ, ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ವಿವರಗಳನ್ನು ನೀವು ಭರ್ತಿ ಮಾಡಬೇಕು.
5. ಇದರ ನಂತರ Get Report ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಎಲ್ಲಾ ಫಲಾನುಭವಿ ರೈತರ ಪಟ್ಟಿಯನ್ನು ಪಡೆಯುತ್ತೀರಿ.
ನೀವು ʼಮಿನರಲ್ ವಾಟರ್ ಕ್ಯಾನ್ʼ ತರಿಸಿಕೊಳ್ತೀರಾ..? ಹಾಗಾದ್ರೆ, ಮಿಸ್ ಮಾಡ್ದೇ ಈ ಸ್ಟೋರಿ ಓದಿ