ಬೆಳಗಾವಿ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ( Government Pre-University College ) ಖಾಲಿ ಇರುವಂತ 814 ಉಪನ್ಯಾಸಕರ ಹುದ್ದೆಗಳನ್ನು ( Lecturer Post ) ಶೀಘ್ರವೇ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ( Minister BC Nagesh ) ತಿಳಿಸಿದ್ದಾರೆ.

Good News : ಹೊಸ ವರ್ಷಕ್ಕೆ ಬಡವರಿಗೆ ಕೇಂದ್ರ ಸರ್ಕಾರದಿಂದ ಗಿಫ್ಟ್ : 1 ವರ್ಷ ಉಚಿತ ಪಡಿತರ ಘೋಷಣೆ

ವಿಧಾನಸಭೆಯಲ್ಲಿ  ಸದಸ್ಯ ಯಮಕನಮರಡಿ ಕೇಳಿದಂತ ಚುಕ್ಕೆ ಗುರಿತಿಲ್ಲದ ಪ್ರಶ್ನೆಗೆ ಉತ್ತರಿಸಿರುವಂತ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 12,858 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 3,941 ಹುದ್ದೆಗಳು ಖಾಲಿ ಇರುತ್ತವೆ ಎಂದು ತಿಳಿಸಿದ್ದಾರೆ.

ಇನ್ನೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 814 ಉಪನ್ಯಾಸಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಅಂತಿಮಗೊಂಡ ನಂತ್ರ, ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಓದುಗರೇ ಗಮನಿಸಿ: ಕೊರೊನಾ ‘ಬೂಸ್ಟರ್ ಡೋಸ್’ ಬುಕ್ ಈ ರೀತಿ ಬುಕ್‌ ಮಾಡಿ | How To Book Booster Dose

Share.
Exit mobile version