ನವದೆಹಲಿ : ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬಳಕೆ ಹೆಚ್ಚಾಗಿರುವುದರಿಂದ ರೈತರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಗೊಬ್ಬರ ಚೀಲಗಳಿಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ.
ಅದ್ರಂತೆ, ನ್ಯಾನೋ ಯೂರಿಯಾವನ್ನ 2021ರಲ್ಲಿ ತರಲು ಕೇಂದ್ರವು ಹಲವಾರು ಪ್ರಯತ್ನಗಳನ್ನ ಮಾಡಿದ್ದು, ಇಫ್ಕೋ ತಯಾರಿಸಿದ ಲಿಕ್ವಿಡ್ ನ್ಯಾನೊ-ಯೂರಿಯಾವನ್ನ ಮಾರುಕಟ್ಟೆಯಲ್ಲಿ ಪರಿಚಯಿಸಲು ಅನುಮೋದಿಸಿತು. ಅದರ ನಂತರ, ಈ ನ್ಯಾನೊ ಯೂರಿಯಾವನ್ನ ಮಾರುಕಟ್ಟೆಗೆ ತರಲಾಯಿತು. ಇದರಿಂದ ಯೂರಿಯಾ ಚೀಲಗಳಿಗೆ ಸರತಿ ಮುಂದೆ ನಿಲ್ಲುವ ಪರಿಸ್ಥಿತಿ ಇಲ್ಲದಂತಾಗಿದೆ.
ಸಧ್ಯ ಮುಂಬರುವ ಮಳೆಗಾಲವನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಸಗೊಬ್ಬರ ಬಳಕೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿಯೂ ನ್ಯಾನೊ ಲಿಕ್ವಿಡ್ ಡಿಎಪಿ ತರಲು ಕೇಂದ್ರ ಒಪ್ಪಿಗೆ ನೀಡಿದೆ.
ಈ ವಿಷಯವನ್ನ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ ಸಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ನ್ಯಾನೋ ಯೂರಿಯಾ ನಂತರ ನ್ಯಾನೋ ಡಿಎಪಿಗೂ ಅನುಮೋದನೆ ನೀಡಲಾಗಿದೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮಾಂಡವೀಯ ಹೇಳಿದರು.
उर्वरक में आत्मनिर्भरता की तरफ एक ओर बड़ी उपलब्धि!
भारत सरकार ने नैनो यूरिया के बाद अब नैनो 𝗗𝗔𝗣 को भी मंजूरी दे दी है।
प्रधानमंत्री @NarendraModi जी के विजन आत्मनिर्भर भारत के तहत, यह सफलता किसानों को अत्यधिक लाभ देने वाली है। अब एक बैग DAP भी, एक बोतल DAP के रूप में मिलेगा। pic.twitter.com/taHpj7kQq1
— Dr Mansukh Mandaviya (@mansukhmandviya) March 4, 2023
ಒಂದು ಡಿಎಪಿ ಚೀಲದ ಬೆಲೆ 1350 ರೂ. ಆದರೆ ದ್ರವರೂಪದಲ್ಲಿ ಬರುತ್ತಿರುವ 500 ಎಂಎಲ್ ಡಿಎಪಿಯನ್ನ 600 ರೂ.ಗೆ ನಿಗದಿಪಡಿಸಲಾಗಿದೆ. 500 ಮಿಲಿ ದ್ರವ ಡಿಎಪಿ ಒಂದು ಚೀಲ ಡಿಎಪಿಗೆ ಸಮವಾಗಿದೆ.
ನ್ಯಾನೋ ಯೂರಿಯಾ ತಯಾರಕರಾದ IFFCO ಈ ನ್ಯಾನೋ ಲಿಕ್ವಿಡ್ DAP ಅನ್ನು ತಯಾರಿಸುತ್ತದೆ. ಇನ್ನು ದೇಶದಲ್ಲಿ ಯೂರಿಯಾ ನಂತರ ಹೆಚ್ಚು ಬಳಕೆಯಾಗುವ ಗೊಬ್ಬರ ಡಿಎಪಿಯಾಗಿದೆ. ಅಂದ್ಹಾಗೆ, ಸರ್ಕಾರ ನ್ಯಾನೋ ಯೂರಿಯಾಕ್ಕೆ ಸಬ್ಸಿಡಿ ನೀಡುತ್ತಿಲ್ಲ. ನ್ಯಾನೊ ಲಿಕ್ವಿಡ್ ಯೂರಿಯಾ ಪ್ರತಿ ಬಾಟಲಿಗೆ 240 ರೂಪಾಯಿ. ಅದೇ ಯೂರಿಯಾ ಚೀಲ 280 ರೂಪಾಯಿ.
ಅಲ್ಲದೆ, ಒಂದು ಬ್ಯಾಗ್ ಡಿಎಪಿ ರೂ.1350 ಆಗಿದ್ದರೆ ಅದಕ್ಕೆ ಸಮಾನವಾದ 500 ಎಂಎಲ್ ಲಿಕ್ವಿಡ್ ಡಿಎಪಿ ರೂ.600ಕ್ಕೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ.
ನ್ಯಾನೊ-ಗೊಬ್ಬರಗಳು ಭಾರತಕ್ಕೆ ವಿದೇಶಿ ವಿನಿಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಸರ್ಕಾರದ ಸಬ್ಸಿಡಿಗಳನ್ನ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.
ಸಾರ್ವಜನಿಕ ವಲಯದ ನೀತಿ ಹುಚ್ಚುತನವಲ್ಲ, ಸರ್ಕಾರ ಎಲ್ಲವನ್ನೂ ಮಾರಾಟ ಮಾಡ್ತಿಲ್ಲ : ನಿರ್ಮಲಾ ಸೀತಾರಾಮನ್
‘ನಾವು ಭ್ರಷ್ಟಾಚಾರ ಸಹಿಸಲ್ಲ, ನನ್ನ ಮಗ ಭ್ರಷ್ಟಾಚಾರ ಮಾಡಿದ್ರೂ ಜೈಲಿಗೆ ಹಾಕ್ತೀನಿ’ : ಅರವಿಂದ್ ಕೇಜ್ರಿವಾಲ್
NHM ಗುತ್ತಿಗೆ ನೌಕರರ ಸಂಭಾವನೆ ಶೇ.15 ಹೆಚ್ಚಳ: ಸರ್ಕಾರ ನೀಡಿದ್ದ ಭರವಸೆ ಸಾಕಾರ – ಸಚಿವ ಡಾ.ಕೆ.ಸುಧಾಕರ್