ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಸಿಹಿಸುದ್ದಿ ನೀಡಿದ್ದು, ರೇಷ್ಮೆ ವಿಸ್ತರಣಾಧಿಕಾರಿಗಳ 72 ಹುದ್ದೆಗಳ ಭರ್ತಿಗೆ ಕೆಪಿಎಸ್ ಸಿ ಅಧಿಸೂಚನೆ ಹೊರಡಿಸಿದೆ.

Video:‌ ಮಧ್ಯಪ್ರದೇಶದ ಕಾಲೇಜೊಂದರಲ್ಲಿ ಕಿರಿಯರ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಕಪಾಳಮೋಕ್ಷ ಮಾಡಿದ ಸೀನಿಯರ್ಸ್

ರೇಷ್ಮೆ ವಿಸ್ತರಣಾಧಿಕಾರಿಗಳ 72 ಹುದ್ದೆಗಳಿಗೆ ಆಗಸ್ಟ್ 10 ರಿಂದ ಸೆ.9 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಪ್ರವರ್ಗ 2ಎ, ಬಿ, 3 ಎ, ಬಿ ಅಭ್ಯರ್ಥಿಗಳಿಗೆ 300 ರೂ. ಮಾಜಿ ಸೈನಿಕರಿಗೆ 50 ರೂ.ಶುಲ್ಕ ವಿಧಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share.
Exit mobile version