ನವದೆಹಲಿ : ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 764 ರೂ.ಗಳಷ್ಟು ಇಳಿದು 52,347 ರೂ.ಗೆ ತಲುಪಿದೆ.

ಅದ್ರಂತೆ, ಹಿಂದಿನ ವಹಿವಾಟಿನಲ್ಲಿ ಈ ಅಮೂಲ್ಯ ಲೋಹವು ಪ್ರತಿ 10 ಗ್ರಾಂಗೆ 53,111 ರೂ.ಗೆ ಕೊನೆಗೊಂಡಿತ್ತು. ಬೆಳ್ಳಿ ಬೆಲೆ ಇಂದು ಪ್ರತಿ ಕೆಜಿಗೆ 1,592 ರೂಪಾಯಿ ಇಳಿಕೆಯಾಗಿ 58,277 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಇದು 59,869 ರೂ.ಗಳಷ್ಟಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ ಎಂದು ಹೇಳಲಾಗುತ್ತಿದೆ.

ಅಂದ್ಹಾಗೆ, ಸೋಮವಾರ, ಸ್ವಾತಂತ್ರ್ಯ ದಿನದ ಕಾರಣದಿಂದಾಗಿ ಬುಲಿಯನ್ ಮಾರುಕಟ್ಟೆಯನ್ನ ಮುಚ್ಚಲಾಗಿತ್ತು. ಇದಕ್ಕೂ ಮೊದಲು ಶುಕ್ರವಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆ ಕಂಡಿದ್ದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಔನ್ಸ್ಗೆ 1,775 ಡಾಲರ್‌ಗೆ ತಲುಪಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ತಿಳಿಸಿದೆ. ಅದೇ ಸಮಯದಲ್ಲಿ, ಬೆಳ್ಳಿ ಔನ್ಸ್ʼಗೆ 20.13 ಡಾಲರ್‌ನಲ್ಲಿ ವಹಿವಾಟು ನಡೆಸಿತು. ಮತ್ತೊಂದೆಡೆ, ದೇಶೀಯ ಷೇರುಗಳು ಏರುತ್ತಲೇ ಇವೆ. ಸೆನ್ಸೆಕ್ಸ್ ಇಂದು ಸುಮಾರು 380 ಅಂಕಗಳ ಏರಿಕೆಯೊಂದಿಗೆ 59,842 ಅಂಶಗಳಲ್ಲಿ ವಹಿವಾಟು ಅಂತ್ಯಕಂಡರೆ, ನಿಫ್ಟಿ 127 ಅಂಕಗಳ ಏರಿಕೆಯೊಂದಿಗೆ 17,825 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

Share.
Exit mobile version