ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI).. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆ. ಇದು ದೇಶದ ಹಳ್ಳಿಗಳಿಗೂ ಹರಡಿರುವ ಬ್ಯಾಂಕಿಂಗ್ ಜಾಲವಾಗಿದ್ದು, ದೇಶಾದ್ಯಂತ 45 ಕೋಟಿಗೂ ಹೆಚ್ಚು ಗ್ರಾಹಕರನ್ನ ಹೊಂದಿದೆ. ಬ್ಯಾಂಕಿಂಗ್ ಸೇವೆಗಳನ್ನ ಗ್ರಾಹಕರಿಗೆ ಹತ್ತಿರ ತರಲು ಎಸ್‌ಬಿಐ ಹೆಚ್ಚು ಹೆಚ್ಚು ಶ್ರಮಿಸುತ್ತಿದೆ. ಶೀಘ್ರದಲ್ಲೇ ಎಸ್‌ಬಿಐ ವಾಟ್ಸಾಪ್‌ (WhatsApp) ಬ್ಯಾಂಕಿಂಗ್ ಸೇವೆಗಳನ್ನ ಒದಗಿಸಲಿದೆ. ಹೌದು, SBI ವಾಟ್ಸಾಪ್‌ ಬ್ಯಾಂಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಈ ವಿಷಯ ತಿಳಿಸಿದ್ದಾರೆ. ಅದ್ರಂತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್ ಬಿಐ ಗ್ರಾಹಕರು ವಾಟ್ಸಾಪ್‌ ಮೂಲಕ ಸೇವೆಗಳನ್ನ ಪಡೆಯಬಹುದಾಗಿದೆ.

ಈಗಾಗಲೇ ಹಲವು ಬ್ಯಾಂಕ್ʼಗಳು ವಾಟ್ಸಾಪ್‌ ಮೂಲಕ ಬ್ಯಾಂಕಿಂಗ್ ಸೇವೆ ನೀಡುತ್ತಿರುವುದು ಗೊತ್ತೇ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನ ಒದಗಿಸುತ್ತಿವೆ. ಬಹುತೇಕ ಎಲ್ಲಾ ಖಾಸಗಿ ಬ್ಯಾಂಕ್‌ಗಳು ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳನ್ನ ನೀಡುತ್ತವೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐ ಈ ವಿಷಯದಲ್ಲಿ ಹಿಂದೆ ಬಿದ್ದಿದೆ. ಆದ್ರೆ, ಈಗ ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

ಕಾರ್ಪೊರೇಟ್ ಕ್ಲೈಂಟ್‌ಗಳು ಮತ್ತು ಅಗ್ರಿಗೇಟರ್‌ಗಳಿಗಾಗಿ API ಅನ್ನು ಪ್ರಾರಂಭಿಸುವುದಾಗಿ SBI ಘೋಷಿಸಿದೆ. API ಬ್ಯಾಂಕಿಂಗ್ ವ್ಯವಸ್ಥೆಯನ್ನ ಪ್ರಾರಂಭಿಸಿದರೆ, ಬ್ಯಾಂಕ್ ಮತ್ತು ಕ್ಲೈಂಟ್ ಸರ್ವರ್‌ಗಳ ನಡುವಿನ ಸಂವಹನವು ಸುಲಭವಾಗುತ್ತದೆ. ಎರಡು ವ್ಯವಸ್ಥೆಗಳ ನಡುವೆ ಡೇಟಾ ವರ್ಗಾವಣೆ ಸುಲಭ. ಗ್ರಾಹಕರು ತೊಂದರೆ-ಮುಕ್ತ ಮತ್ತು ಸುರಕ್ಷಿತ ಸೇವೆಗಳನ್ನು ಪಡೆಯುತ್ತಾರೆ. ಎಸ್‌ಬಿಐ ಹಲವು ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ ಸೇವೆಗಳನ್ನು ಬಳಸುತ್ತಿದೆ. ಆದರೆ, ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಯಾವ ರೀತಿಯ ಸೇವೆಗಳು ಲಭ್ಯವಿರುತ್ತವೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಈಗಾಗಲೇ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ವಾಟ್ಸಾಪ್‌ ಮೂಲಕ ಹೋಲ್ಡರ್‌ಗಳಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ SBI ಕಾರ್ಡ್ ಈಗಾಗಲೇ ವಾಟ್ಸಾಪ್ ಸಂಪರ್ಕ ಸೇವೆಯನ್ನ ಪ್ರಾರಂಭಿಸಿದೆ. ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಖಾತೆಯ ವಿವರಗಳು, ರಿವಾರ್ಡ್ ಪಾಯಿಂಟ್‌ಗಳು, ಬಾಕಿ ಉಳಿದಿರುವ ಹಣ, ಕಾರ್ಡ್ ಪಾವತಿಗಳಂತಹ ಎಲ್ಲಾ ಸೇವೆಗಳನ್ನ ಪ್ರವೇಶಿಸಬಹುದು. ಎಸ್‌ಬಿಐ ಕಾರ್ಡ್ ಹೊಂದಿರುವವರು ಈ ಸೇವೆಯನ್ನ ಬಳಸಲು ಮುಂಗಡವಾಗಿ ನೋಂದಾಯಿಸಿಕೊಳ್ಳಬೇಖು. ಅದ್ರಂತೆ, ಖಾತೆಗೆ ಲಿಂಕ್‌ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಯಿಂದ 08080945040 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ನೋಂದಾಯಿಸಿದ ನಂತ್ರ ವಾಟ್ಸಾಪ್‌ನಲ್ಲಿ OPTIN ಎಂದು ಟೈಪ್ ಮಾಡಿ 9004022022ಗೆ ಸಂದೇಶ ಕಳುಹಿಸಿ. ಅದರ ನಂತ್ರ ನೀವು ವಾಟ್ಸಾಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಸಂಬಂಧಿತ ಸೇವೆಗಳನ್ನ ಪಡೆಯಬಹುದು.

Share.
Exit mobile version