ಸುಭಾಷಿತ :

Wednesday, April 1 , 2020 2:31 AM

ಕೇಂದ್ರ ಸರ್ಕಾರದಿಂದ `ಒಬಿಸಿ ವರ್ಗಕ್ಕೆ’ ಭರ್ಜರಿ ಗುಡ್ ನ್ಯೂಸ್


Saturday, February 22nd, 2020 6:04 am

ನವದೆಹಲಿ : ಒಬಿಸಿ ವರ್ಗಕ್ಕೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ಹಿಂದುಳಿದ ವರ್ಗದವರು ಮೀಸಲು ಪಡೆಯಲು ಇರುವ ಅರ್ಹತಾ ಮಿತಿಯನ್ನು ಈಗಿನ ವಾರ್ಷಿಕ 8 ಲಕ್ಷ ರೂ.ನಿಂದ 12 ಲಕ್ಷ ರೂ.ಗೆ ಏರಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ ಎನ್ನಲಾಗಿದೆ.

ಇದು ಜಾರಿಗೆ ಬಂದರೆ ಇನ್ನುಷ್ಟು ಹಿಂದುಳಿದವರು ಮೀಸಲು ಯೋಜನೆ ಪಡೆಯಲು ಅರ್ಹರಾಗಲಿದ್ದಾರೆ. ಅಂದರೆ ಈವರೆಗೆ 8 ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ಆದಾಯ ಇದ್ದರೆ ಅಂಥ ಹಿಂದುಳಿದ ವರ್ಗದವರು ಮೀಸಲು ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಈಗ ಮಿತಿ ಹೆಚ್ಚಳವಾದರೆ 12 ಲಕ್ಷ ರೂ.ವರೆಗೆ ಆದಾಯ ಇದ್ದವರು ಉದ್ಯೋಗ ಶಿಕ್ಷಣದಲ್ಲಿ ಮೀಸಲು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

ಒಬಿಸಿ ಕೆನೆಪದರದ ಬಗ್ಗೆ ಅಧ್ಯಯನಕ್ಕೆ ಕೇಂದ್ರ ಸರ್ಕಾರ ದ್ವಿಸದಸ್ಯ ಸಮಿತಿ ರಚಿಸಿತ್ತು. ಈ ಸಮಿತಿ ಮಾಡಿದ ಶಿಫಾರಸಿನ ಅನ್ವಯ ಸರ್ಕಾರ ಈ ಬದಲಾವಣೆ ಮಾಡಲು ಹೊರಟಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions